Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಕರಾವಳಿಯ ವಿವಿಧೆಡೆ ಗಾಳಿ ಸಹಿತ ಮಳೆ- ಬಿಸಿಲ ಧಗೆಗೆ ತಂಪೆರೆದ ಬೇಸಿಗೆ ಮಳೆ

ಉಡುಪಿ: ಕರಾವಳಿಯ ವಿವಿಧ ಬಾಗಗಲ್ಲಿ ಅದರಲ್ಲೂ ಮುಖ್ಯವಾಗಿ ಪಶ್ಚಿಮ ಘಟ್ಟಭಾಗದ ತಪ್ಪಲು ಪ್ರದೇಶಗಳ ಹಲವು ಭಾಗಗಳಲ್ಲಿ ಸೋಮವಾರ ಮಳೆಯಾಗಿದೆ. ಶೆಕೆ ವಾತಾವರಣದಿಂದ ಸಂಕಟಪಡುತ್ತಿದ್ದ ಈ ಭಾಗದ ಜನ ಭೂ ವಾತಾವರಣವನ್ನು ತಂಪಾಗಿಸಿದ ಮಳೆಯಿಂದಾಗಿ ಸಮಾಧಾನಗೊಂಡರು.

ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ನಾರಾವಿ, ಸುಬ್ರಹ್ಮಣ್ಯ, ವೇಣೂರು, ಪುಂಜಾಲಕಟ್ಟೆ, ಪುತ್ತೂರು, ವಿಟ್ಲ, ಕಡಬ ಮುಂತಾದ ಭಾಗಗಳಲ್ಲಿ ಹಾಗೂ ಸುತ್ತಿನ ಪರಿಸರದಲ್ಲಿ ಗಾಳಿ ಸಹಿತ ಮಳೆ ಬಿದ್ದಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ.

ಮಡಿಕೇರಿ ಹಾಗೂ ಆಗುಂಬೆ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಕುರಿತಾಗಿ ಹವಾಮಾನ ಇಲಾಖೆ ಸೂಚನೆ ನೀಡಿತ್ತು. ಕಳೆದ ಕೆಲವು ದಿನಗಳಿಂದ ಘಟ್ಟ ಭಾಗದ ತಪ್ಪಲು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗುತ್ತಿದೆ.

ಈ ಭಾಗದಲ್ಲಿ ಬೀಸಿದ ಭಾರೀ ಗಾಳಿಯ ಕಾರಣದಿಂದ ಮರ ಮತ್ತು ಮರದ ಗೆಲ್ಲುಗಳು ಮುರಿದುಬಿದ್ದ ವಿದ್ಯುತ್‌ ವ್ಯತ್ಯಯ ಉಂಟಾಗಿದೆ ಮತ್ತು ಕೆಲವು ಕಡೆ ಮನೆಗಳ ಮೇಲೆ ಮರಬಿದ್ದು ಹೆಂಚುಗಳು ಒಡೆದುಹೋಗಿವೆ. ಕೆಲವು ಕಡೆಗಳಲ್ಲಿ ವಿದ್ಯುತ್‌ ಲೈನ್‌ ಗಳು ಹಾನಿಗೊಂಡಿವೆ.

No Comments

Leave A Comment