Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ರೋಟರಿ ಉಡುಪಿ ಮತ್ತು ರೋಟರಿ ಸಮುದಾಯ ದಳ- ಕೃಷಿ ಮಾಹಿತಿ ಮತ್ತು ಕೃಷಿಕರಿಗೆ ಸಮ್ಮಾನ

ಉಡುಪಿ : ರೋಟರಿ ಉಡುಪಿ ಮತ್ತು ರೋಟರಿ ಸಮುದಾಯ ದಳ, ಕರಂಬಳ್ಳಿ ಇವರಿಂದ ಜಂಟಿಯಾಗಿ ಕೃಷಿ ಮಾಹಿತಿ ಮತ್ತು ಕೃಷಿಕರಿಗೆ ಸಮ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಅವರು ಲಾಬದಾಯಕ ಕೃಷಿ ಬಗ್ಗೆ ಮತ್ತು ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ರು ಸಣ್ಣ ಸ್ಠಳದಲ್ಲಿ ಯಶಸ್ವಿಯಾಗಿ ಕೃಷಿ ಮಾಡುವ ಬಗ್ಗೆ ವಿವರಿಸಿದರು.

ಪ್ರಗತಿಪರ ಕೃಷಿಕ ಮತ್ತು ಪೆರಂಪಳ್ಳಿ ಕೃಷಿಕ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶ್ರೀಯಾನ್ ಮತ್ತು ಕೃಷಿಯಲ್ಲಿ ಸಾದನೆಮಾಡಿದ ನಾಗೇಶ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ರೋಟರಿ ಉಡುಪಿ ಅಧ್ಯಕ್ಷ ರೋ.ಚಂದ್ರಶೇಖರ ಅಡಿಗರು ಸ್ವಾಗತಿಸಿದರು. ಸನ್ಮಾನಿತರಾದ ಸುಬ್ರಹ್ಮಣ್ಯ ಶ್ರೀಯಾನ್ ತಮ್ಮ ಅನುಭವವನ್ನು ಹಂಚಿಕೊಂಡರು ಮುಖ್ಯ ಅತಿಥಿ ಸಹಾಯಕ ರಾಜ್ಯಪಾಲ ರೋ. ಡಾ. ಗಣೇಶ್ ರವರು ಇಂತಹ ಉತ್ತಮ ಕಾರ್ಯ ಕ್ರಮ ಸಂಘಟಿಸಿದ ರೋಟರಿ ಮತ್ತು ಸಮುದಾಯದಳ ವನ್ನು ಅಭಿನಂದಿಸಿದರು.

ರೋಟರಿ ಸಮುದಾಯದ ಳದ ಮುಂದಿನ ಅಧ್ಯಕ್ಷ ಶ್ರೀ ಶ್ರೀಪತಿ ಭಟ್ಟ ರು ಸನ್ಮಾನಿತರನ್ನು ಪರಿಚಯಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶ್ರೀನಿವಾಸ ಬಲ್ಲಾಳ ರು ಸಮುದಾಯಕ್ಕೆ ರೋಟರಿ ಕೊಡುಗೆ ಯನ್ನು ಮತ್ತ್ತು ಕೃಷಿಕ ಸಂಘದಸಾದನೆ ಮತ್ತ್ತು ಸಂಘಟನೆಯ ಮಹತ್ವದ ಬಗ್ಗೆ ಕೊಂಡಾಡಿದರು. ರೋಟರಿ ಕಾರ್ಯದರ್ಶಿ ರೋ. ಜನಾರ್ಧನ ಭಟ್ಟರು ಧನ್ಯವಾದ ಅರ್ಪಿಸಿದರು. ರೋ.ರಾಮಚಂದ್ರ ಉಪಾಧ್ಯಾಯ ರು ಕಾರ್ಯಕ್ರಮ ನಿರ್ವಹಿಸಿದರು.

No Comments

Leave A Comment