Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಅಸಮಂಜಸ ಬೇಡ,ನಾನು ಸ್ಪರ್ಧಿಸುವುದಿಲ್ಲ; ಸ್ಪೀಕರ್‌ ಸುಮಿತ್ರಾ ಮಹಾಜನ್‌

ಇಂಧೋರ್‌: ಲೋಕಸಭಾ ಸ್ಪೀಕರ್‌, ಇಂಧೋರ್‌ನ ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್‌ ಅವರು ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶುಕ್ರವಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಕ್ಷ ಇಂಧೋರ್‌ ಅಭ್ಯರ್ಥಿ ಪ್ರಕಟಣೆಗೆ ವಿಳಂಬ ಧೋರಣೆ ಮಾಡುತ್ತಿರುವ ಕುರಿತಾಗಿ ನೋವನ್ನು ವ್ಯಕ್ತಪಡಿಸಿರುವ 76 ರ ಹರೆಯದ ಬಿಜೆಪಿ ಹಿರಿಯ ನಾಯಕಿ ಸುಮಿತ್ರಾ ಮಹಾಜನ್‌, ನಾನು ಬಹಳ ಹಿಂದಿನಿಂದಲೂ ವರಿಷ್ಠರ ಬಳಿ ನಿರ್ಣಯವನ್ನು ತೆಗೆದುಕೊಳ್ಳಲು ಹೇಳಿದ್ದೆ. ಆದರೆ ಅವರ ಮನದಲ್ಲಿ ಇನ್ನೂ ಅಸಮಂಜಸ ಇರುವಂತಿದೆ. ಆದ್ದರಿಂದ ನಾನು ಈ ಘೋಷಣೆ ಮಾಡುತ್ತಿದ್ದು, ಈ ಬಾರಿಯ ಚುನಾವಣೆಗೆ ಸ್ಫರ್ಧಿಸುವುದಿಲ್ಲ ಎಂದಿದ್ದಾರೆ.

ಇಂಧೋರ್‌ನ ಜನತೆ ಇದುವರೆಗೆ ನನ್ನ ಮೇಲೆ ಪ್ರೀತಿ ಇರಿಸಿದ್ದಾರೆ. ಪಕ್ಷದ ನಾಯಕರು, ಕಾರ್ಯಕರ್ತರು ಸಹಕರಿಸಿದ್ದಾರೆ ಅವರೆಲ್ಲರಿಗೂ ಹೃದಯದಿಂದ ಅಭಾರಿಯಾಗಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಿತ್ರಾ ಮಹಾಜನ್‌ ಅವರು 8 ಬಾರಿ ಇಂಧೋರ್‌ನಿಂದ ಜಯ ಸಾಧಿಸಿ ಸಂಸತ್‌ ಪ್ರವೇಶಿಸಿದ್ದರು.

75 ದಾಟಿದ ನಾಯಕರಿಗೆ ಬಿಜೆಪಿ ಈ ಬಾರಿ ಟಿಕೆಟ್‌ ನೀಡದೆ ಬದಿಗೆ ಸರಿಸಿದ್ದು, ಎಲ್‌.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್‌ ಜೋಷಿ ಅವರಿಗೆ ಟಿಕೆಟ್‌ ನೀಡಿಲ್ಲ.

No Comments

Leave A Comment