Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಅಂತರ್‌ ವಲಯ ಬ್ಯಾಡ್ಮಿಂಟನ್‌: ಆಳ್ವಾಸ್‌ಗೆ ಪ್ರಶಸ್ತಿ

ಮೂಡಬಿದಿರೆ: ಒಡಿಶಾದ ಖಾಲಿಕೋಟ್‌ನಲ್ಲಿ ನಡೆದ ಐದನೇ ರಾಷ್ಟ್ರೀಯ ಅಂತರ್‌ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕರ್ನಾಟಕ ಮಹಿಳಾ ತಂಡವು ಪ್ರಶಸ್ತಿ ಗೆದ್ದುಕೊಂಡಿದೆ. ಐದು ವಲಯಗಳ 10 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಫೈನಲ್‌ನಲ್ಲಿ ಕರ್ನಾಟಕ ತಂಡವು ತಮಿಳುನಾಡು ತಂಡವನ್ನು 35-19, 35-31 ಅಂಕಗಳಿಂದ ಸೋಲಿಸಿ ಎರಡನೇ ಬಾರಿ ಈ ಪ್ರಶಸ್ತಿ ಗೆದ್ದ ಸಾಧನೆ ಮಾಡಿತು.

ಲೀಗ್‌ ಹಾಗೂ ನಾಕೌಟ್‌ ಮಾದರಿಯಲ್ಲಿ ಸ್ಪರ್ಧೆ ನಡೆದಿತ್ತು. ಲೀಗ್‌ನಲ್ಲಿ ಕರ್ನಾಟಕ ತಂಡವು ಹರಿಯಾಣ, ಮುಂಬಯಿ, ಒಡಿಶಾ ಮತ್ತು ಛತ್ತೀಸ್‌ಗಢ ತಂಡವನ್ನು ಸೋಲಿಸಿತ್ತು. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು 35-12, 35-16 ನೇರ ಸೆಟ್‌ಗಳಿಂದ ಕೆಡಹಿತ್ತು. ಇನ್ನೊಂದು ಸೆಮಿಫೈನಲ್‌ನಲ್ಲಿ ತಮಿಳುನಾಡು ತಂಡವು ಛತ್ತೀಸ್‌ಗಢ ತಂಡವನ್ನು ಸೋಲಿಸಿತ್ತು.

ಈ ಹಿಂದೆ ತಮಿಳುನಾಡಿನ ದಿಂಡಿಗಲ್‌ನಲ್ಲಿ ನಡೆದ ದಕ್ಷಿಣ ವಲಯ ಬಾಲ್‌ ಬ್ಯಾಡ್ಮಿಂಟನ್‌ ಪಂದ್ಯಾಟದಲ್ಲಿ ಕರ್ನಾಟಕ ಪ್ರಶಸ್ತಿ ಜಯಿಸಿದ್ದರೆ ತಮಿಳುನಾಡು ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಜಯಲಕ್ಷ್ಮೀ ನೇತೃತ್ವದ ಕರ್ನಾಟಕ ತಂಡ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸೀನಿಯರ್‌ ಚಾಂಪಿಯನ್‌ಶಿಪ್‌ನಲ್ಲೂ ಪ್ರಶಸ್ತಿ ಗೆದ್ದ ಸಾಧನೆ ಮಾಡಿತ್ತು.

No Comments

Leave A Comment