Log In
BREAKING NEWS >
““““““““‘ಸಮಸ್ತ ಕ್ರೈಸ್ತ ಸಮಾಜ ಬಾ೦ಧವರಿಗೆ ಗುಡ್ ಫ್ರೈಡ್ ಹಬ್ಬದ ಶುಭಾಶಯಗಳು”””””’

‘ಕ್ವೀನ್’ ರಿಮೇಕ್ ‘ಬಟರ್ ಫ್ಲೈ’ಗೆ ಯು/ಎ ಪ್ರಮಾಣಪತ್ರ

ಕ್ವೀನ್ ಚಿತ್ರದ ಕನ್ನಡ ರಿಮೇಕ್ ಗೆ ಸೆನ್ಸಾರ್ ಮಂಡಳಿಯಿಂದ ಒಪ್ಪಿಗೆ ಸಿಕ್ಕಿದೆ. ರಮೇಶ್ ಅರವಿಂದ್ ನಿರ್ದೇಶನದ ಬಟರ್ ಫ್ಲೈ ಹೆಸರಿನಲ್ಲಿ ಚಿತ್ರ ತಯಾರಾಗಿದ್ದು ಯಾವುದೇ ದೃಶ್ಯಗಳಿಗೆ ಕತ್ತರಿ ಹಾಕದೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

ಪಾರುಲ್ ಯಾದವ್ ನಾಯಕಿಯಾಗಿ ನಟಿಸಿದ ಬಟರ್ ಫ್ಲೈ ಮಿಡಿಯಂಟೆ ಫಿಲ್ಮ್ಸ್ ನಡಿ ತಯಾರಾಗಿದ್ದು ಇದಕ್ಕೆ ಸ್ವತಃ ಪಾರುಲ್ ಯಾದವ್ ಸಹ ನಿರ್ಮಾಪಕಿಯಾಗಿದ್ದಾರೆ. ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಚಿತ್ರ ತಯಾರಾಗಿದೆ.

ಮಮತಾ ಸಾಗರ್ ಅವರ ಜೊತೆ ರಮೇಶ್ ಅರವಿಂದ್ ಕೂಡ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ತಮಿಳಿನಲ್ಲಿ ಕಾಜಲ್ ಅಗರ್ವಾಲ್ ನಾಯಕಿಯಾಗಿರುವ ಪ್ಯಾರಿಸ್ ಪ್ಯಾರಿಸ್ ಚಿತ್ರವನ್ನು ಕೂಡ ರಮೇಶ್ ಅವರೇ ನಿರ್ದೇಶಿಸಿದ್ದಾರೆ. ತೆಲುಗಿನಲ್ಲಿ ಮಹಾಲಕ್ಷ್ಮಿ ಹೆಸರಿನಲ್ಲಿ ತಮನ್ನಾ ಭಾಟಿಯಾ, ಮಲಯಾಳಂನಲ್ಲಿ ಝಮ್ ಝಮ್ ಹೆಸರಿನಲ್ಲಿ ಮಂಜಿಮಾ ಮೋಹನ್ ನಟಿಸಿದ್ದಾರೆ.

ಚಿತ್ರದ ಟೀಸರ್ ಮತ್ತು ಹಾಡುಗಳನ್ನು ಅಮಿತ್ ತ್ರಿವೇದಿ ಬರೆದಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಾಲ್ಕೂ ಭಾಷೆಗಳಲ್ಲಿ ಚಿತ್ರ ಒಟ್ಟಿಗೆ ಬಿಡುಗಡೆಯಾಗುತ್ತದೆಯೇ ಅಥವಾ ಕನ್ನಡ ಭಾಷೆಯಲ್ಲಿ ಮಾತ್ರ ಮೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆಯೇ ಎಂದು ಇನ್ನೂ ಚಿತ್ರತಂಡ ನಿರ್ಧರಿಸಿಲ್ಲ.

No Comments

Leave A Comment