Log In
BREAKING NEWS >
ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 20ಕ್ಕೆ ಏರಿಕೆ, ಹಲವರ ಸ್ಥಿತಿ ಗಂಭೀರ....

ರಾಜಸ್ಥಾನ ವಾಯು ನೆಲೆ ಸಮೀಪ ಸಜೀವ ಮೋರ್ಟಾರ್‌ ಬಾಂಬ್‌ : IAF ಅಧಿಕಾರಿಗಳು ಸ್ಥಳಕ್ಕೆ

ಬಿಕಾನೇರ್‌ : ರಾಜಸ್ಥಾನದ ಬಿಕಾನೇರ್‌ ಪಟ್ಟಣದಿಂದ 13 ಕಿ.ಮೀ. ಪಶ್ಚಿಮಕ್ಕಿರುವ ಭಾರತೀಯ ವಾಯು ಪಡೆಯ ನಾಲ್‌ ವಾಯು ನೆಲೆ ಸಮೀಪ ಇಂದು ಬುಧವಾರ ಬೆಳಗ್ಗೆ ಸಜೀವ ಮೋರ್ಟಾರ್‌ ಬಾಂಬ್‌ ಪತ್ತೆಯಾಗಿದೆ.

ಪ್ರಕರಣದ ತುರ್ತು ತನಿಖೆಗಾಗಿ ಭಾರತೀಯ ವಾಯು ಪಡೆಯ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಭಾರತ ಮತ್ತು ಪಾಕ್‌ ಗಡಿಯಲ್ಲಿ ಗುಂಡಿನ ಹಾಗೂ ಶೆಲ್‌ ದಾಳಿಯ ಚಕಮಕಿ ನಡೆಯುತ್ತಿರುವ ನಡುವೆಯೇ ಈ ವಿದ್ಯಮಾನ ಕಂಡು ಬಂದಿರುವುದು ಇನ್ನಷ್ಟು ಉದ್ವಿಗ್ನತೆ, ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.

ಮೊನ್ನೆ ಭಾನುವಾರ ರಾತ್ರಿ ಪಂಜಾಬ್‌ ಗಡಿ ಸಮೀಪಕ್ಕೆ ಪಾಕಿಸ್ಥಾನದ ನಾಲ್ಕು ಎಫ್16 ಯುದ್ಧ ವಿಮಾನಗಳು ಹಾರಿ ಬಂದಾಗ ಭಾರತೀಯ ವಾಯು ಪಡೆಯ ಸುಖೋಯಿ 30 ಮತ್ತು ಮಿರಾಜ್‌ 2000 ಯುದ್ಧ ವಿಮಾನಗಳು ಅವುಗಳನ್ನು ಬೆನ್ನಟ್ಟಿ ಹಿಮ್ಮೆಟ್ಟಿಸಿದ್ದವು.

ಪಾಕ್‌ ಯುದ್ಧ ವಿಮಾನಗಳ ಜತೆಗೆ ಕಣ್ಗಾವಲಿನ ಡ್ರೋನ್‌ಗಳು ಕೂಡ ಹಾರಿ ಬಂದಿದ್ದವು; ಗಡಿಯ ಯಾವ ಭಾಗಗಳಲ್ಲಿ ಭಾರತೀಯ ಸೇನಾ ಪಡೆ ನಿಯೋಜಿಸಲ್ಪಟ್ಟಿದೆ ಎಂಬುದನ್ನು ಪತ್ತೆ ಹಚ್ಚಲು ಪಾಕಿಸ್ಥಾನ ಡ್ರೋನ್‌ಗಳನ್ನು ಹಾರಿಸಿದ್ದಿರಬೇಕು ಎಂದು ಶಂಕಿಸಲಾಗಿದೆ.

No Comments

Leave A Comment