Log In
BREAKING NEWS >
ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಈ ಬಾರಿ ನಡೆಯ ಬೇಕಾದ ಭಜನಾ ಸಪ್ತಾಹ ಮಹೋತ್ಸವವನ್ನು ಕೋವಿಡ್-19ರ ಕಾರಣದಿ೦ದ ಮು೦ದೂಡಲಾಗಿದ್ದು ಭಜನಾ ಸಪ್ತಾಹ ಮಹೋತ್ಸವವನ್ನು 2021ನೇ ವರುಷದ ಮಾರ್ಚನಲ್ಲಿ ನಡೆಯಲಿದೆ...

ಪೊಲೀಸ್‌ ಮೇಲೆ ಹಲ್ಲೆ ; ಟಿವಿ ನಟಿ ರುಹಿ ಸಿಂಗ್‌ ಸೇರಿ ಇಬ್ಬರ ವಿರುದ್ಧ ಕೇಸ್‌

ಮುಂಬಯಿ: ಪೊಲೀಸ್‌ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ, ಅಸಭ್ಯವಾಗಿ ವರ್ತಿಸಿದ ಕಾರಣಕ್ಕಾಗಿ ಟಿವಿ ನಟಿ ರುಹಿ ಸಿಂಗ್‌ ಮತ್ತು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕುಡಿದ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದುದನ್ನ ಪ್ರಶ್ನಿಸಿದ ಪೊಲೀಸ್‌ ಅಧಿಕಾರಿಯ ಮೇಲೆ ರುಹಿ ಸಿಂಗ್‌ ಮತ್ತು ಸ್ನೇಹಿತರು ಹಲ್ಲೆ ನಡೆಸಿದ್ದಾರೆ.

ಸೋಮವಾರ ನಸುಕಿನ ವೇಳೆ ಈ ಘಟನೆ ನಡೆದಿದ್ದು, ಹಲ್ಲೆ ನಡೆಸಿದ ಸಂಬಂಧ ರಾಹುಲ್‌ ಸಿಂಗ್‌ ಮತ್ತು ಸ್ವಪ್ನಿಲ್‌ ಸಿಂಗ್‌ ಎಂಬಿಬ್ಬರನ್ನ ಬಂಧಿಸಲಾಗಿದೆ.

ಸೂರ್ಯಾಸ್ಥವಾದ ಬಳಿಕ ಮಹಿಳಾ ಅಪರಾಧಿಯನ್ನು ಬಂಧಿಸಲು ಅವಕಾಶವಿಲ್ಲವಾದುದರಿಂದ ರುಹಿ ಸಿಂಗ್‌ಳನ್ನು ಬಂಧಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಬಳಿಕ ರುಹಿ ಸಿಂಗ್‌ ವೇಗವಾಗಿ ಕಾರು ಚಲಾಯಿಸಿಕೊಂಡು ತೆರಳಿದ್ದು , ಐದು ವಾಹನಗಳಿಗೆ ಗುದ್ದಿಸಿರುವ ಬಗ್ಗೆ ವರದಿಯಾಗಿದೆ.

No Comments

Leave A Comment