Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಮನೆಯಲ್ಲಿ ಮಲಗಿದ್ದ 12 ವರ್ಷದ ಬಾಲಕನನ್ನು ಕೊಂದ ಚಿರತೆ

ಬಲರಾಮಪುರ, ಉತ್ತರ ಪ್ರದೇಶ : ಹನ್ನೆರಡು ವರ್ಷ ಪ್ರಾಯದ ಬಾಲಕನೋರ್ವ ಚಿರತೆಗೆ ಬಲಿಯಾದ ಘಟನೆ ಇಲ್ಲಿ ನಡೆದಿದೆ.

ಬಲರಾಮಪುರದ ಸೋಹೆಲ್ವಾ ಅರಣ್ಯ ವಲಯ ವ್ಯಾಪ್ತಿಗೊಳಪಟ್ಟ ಬಿನಹೋಲಿ ಕಾಲಾ ಗ್ರಾಮದಲ್ಲಿ ನಿನ್ನೆ ಸೋಮವಾರ ರಾತ್ರಿ ಈ ದಾರುಣ ಘಟನೆ ನಡೆಯಿತೆಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನು ರಾತ್ರಿ ತನ್ನ ಮನೆಯಲ್ಲಿ ಮಲಗಿಕೊಂಡಿದ್ದಾಗ ಕಳ್ಳ ಹೆಜ್ಜೆ ಇಟ್ಟು ಮನೆ ಹೊಕ್ಕ ಚಿರತೆ, ಬಾಲಕನ ಮೇಲೆ ದಾಳಿ ನಡೆಸಿತು.

ಬಾಲಕನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ; ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

No Comments

Leave A Comment