Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ:ಲಯನ್ಸ್ ಎ೦ಡ್ ಲಿಯೋ ಕ್ಲಬ್ ಉಡುಪಿ-ಇ೦ದ್ರಾಳಿ ಇದರ ಬೆಳ್ಳಿ ಹಬ್ಬ-ಮಲ್ಪೆಯಲ್ಲಿ ಫುಡ್ ಫೆಸ್ಟ್ ನಲ್ಲಿ ಪತ್ರೋಡೆಗೆ ಭಾರೀ ಬೇಡಿಕೆ

ಲಯನ್ಸ್ ಎ೦ಡ್ ಲಿಯೋ ಕ್ಲಬ್ ಉಡುಪಿ-ಇ೦ದ್ರಾಳಿ ಇದರ ಬೆಳ್ಳಿ ಹಬ್ಬ ಕಾರ್ಯಕ್ರಮ ಉದ್ಘಾಟನೆ

ಮಲ್ಪೆ: ಲಯನ್ಸ್ ಎ೦ಡ್ ಲಿಯೋ ಕ್ಲಬ್ ಉಡುಪಿ-ಇ೦ದ್ರಾಳಿ ಇದರ ಬೆಳ್ಳಿ ಹಬ್ಬದ ಕಾರ್ಯಕ್ರಮವು ಭಾನುವಾರದ೦ದು ಮಲ್ಪೆಯ ಕಡಲತಡಿಯಲ್ಲಿ ನಗರದ ಪ್ರಖ್ಯಾತ ಉದ್ಯಮಿ ಪುರುಷೋತ್ತಮ ಶೆಟ್ಟಿ ಹಾಗೂ ಲಯನ್ ವಿ ಜಿ ಶೆಟ್ಟಿರವರು ದೀಪಬೆಳಗಿಸುವುದರೊ೦ದಿಗೆ ಉದ್ಘಾಟಿಸಿದರು.

ಬೆಳ್ಳಿ ಹಬ್ಬ ಕಾರ್ಯಕ್ರಮದ ಪ್ರಯುಕ್ತ ಫುಡ್ ಫೆಸ್ಟ್ ಕಾರ್ಯಕ್ರಮದೊ೦ದಿಗೆ ಸಮಾಜ ಸೇವೆ ಗೈಯುತ್ತಿರುವವರನ್ನು , ಸಾಧನೆಗೈದ ಸಾಧಕರುಗಳಾದ ಡಾ.ಪಿ.ಭ೦ಡಾರಿ , ರೂಪ ಬಲ್ಲಾಳ್, ಡಾ.ಜಯ೦ತ್ ಅ೦ಬಾಗಿಲು, ವಿಶು ಶೆಟ್ಟಿ ಅ೦ಬಲಪಾಡಿ, ಕುಮಾರಿ ತನುಶ್ರೀ, ಅರ್ಚನ ಜೈವಿಠಲ್, ಬನ್ನ೦ಜೆ ಸ೦ಜೀವ ಸುವರ್ಣ, ನಿತ್ಯಾನ೦ದ ಒಳಕಾಡು,ಮಧುಕರ್ ಸಾಲ್ಯಾನ್ ಮಲ್ಪೆ, ಸುರೇಶ್ ಕರ್ಕೆರರವನ್ನು ಅಭಿನ೦ದಿಸಲಾಯಿತು.

ಇದೇ ಸ೦ದರ್ಭದಲ್ಲಿ ಶಿರಿಬೀಡುವಿನ ಪ್ರಾಣೇಶ್ ಶೇಟ್ ದ೦ಪತಿಗಳು ನಾಲ್ಕು ಶ್ರವಣ ದೋಷ ನಿವಾರಣ ಯ೦ತ್ರವನ್ನು ಕ್ಲಬಿನ ಅಧ್ಯಕ್ಷರಿಗೆ ಹಸ್ತಾ೦ತರಿಸಿದರು.

ಕಾರ್ಯಕ್ರಮದ ಸ೦ಯೋಜಕರಾದ ಲಯನ್ ಚ೦ದ್ರಶೇಖರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೇಮ್ ಕುಮಾರ್ ರವರ ಬಳಗದಿ೦ದ ಸ೦ಗೀತ ರಸಮ೦ಜರಿ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.

ಲಯನ್ ಮೋಹನ್ ಎ೦ ಪಿರವರು ಸ್ವಾಗತಿಸಿ, ಲಯನ್ ಜಯಕರ ಶೆಟ್ಟಿ ಇ೦ದ್ರಾಳಿ ರವರು ಪ್ರಸ್ತಾವಿಕವಾಗಿ ಮಾತನಾಡಿ, ಲಯನ್ ರತ್ನಾಕರ ಇ೦ದ್ರಾಳಿ ಕಾರ್ಯಕ್ರಮವನ್ನು ನಿರೂಪಿಸಿ, ಲಯನ್ ವಿಜಯ ಕುಮಾರ್ ಶೆಟ್ಟಿ ಧನ್ಯವಾದವನ್ನಿತ್ತರು.

No Comments

Leave A Comment