Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಉಡುಪಿ – ಚಿಕ್ಕಮಗಳೂರು: ಪ್ರಬಲ ಅಭ್ಯರ್ಥಿಗಳು, ಹೆಚ್ಚು ಮತದಾರರು ಉಡುಪಿಯಲ್ಲಿ

ಉಡುಪಿ: ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಮತದಾರರ ಪಾಲು ಮಾತ್ರ ಹೆಚ್ಚಲ್ಲ, ಅಭ್ಯರ್ಥಿಗಳೂ ಹೆಚ್ಚು.

ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 14,94,444. ಈ ಪೈಕಿ ಉಡುಪಿ ಜಿಲ್ಲೆಯಲ್ಲಿ ಒಟ್ಟು 7,68,231 ಇದ್ದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 7,26,213 ಮತದಾರರಿದ್ದಾರೆ. ಮತಗಟ್ಟೆಗಳು ಮಾತ್ರ ಉಡುಪಿ ಜಿಲ್ಲೆಗಿಂತ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೆಚ್ಚಿಗೆ ಇವೆ. ಉಡುಪಿ ಜಿಲ್ಲೆಯಲ್ಲಿ 865 ಮತಗಟ್ಟೆಗಳು, ಚಿಕ್ಕಮಗಳೂರು ಜಿಲ್ಲೆಯಲ್ಲಿ 972 ಇವೆ.

ಈ ಬಾರಿ 12 ಅಭ್ಯರ್ಥಿಗಳು ಕಣ ದಲ್ಲಿದ್ದರೆ ಇವರಲ್ಲಿ 6 ಮಂದಿ ಉಡುಪಿ ಜಿಲ್ಲೆಯವರು. ಶೋಭಾ ಅವರನ್ನು ದ.ಕ. ಜಿಲ್ಲೆಯವರೆಂದು ಪರಿಗಣಿಸಿದರೆ ಒಟ್ಟು 7 ಮಂದಿ ಉಡುಪಿ ಜಿಲ್ಲೆಯವರು, 5 ಮಂದಿ ಚಿಕ್ಕಮಗಳೂರು ಜಿಲ್ಲೆಯವರು. ಉಡುಪಿ ತಾಲೂಕಿನವರಾದ ಪ್ರಮೋದ್‌ ಮಧ್ವರಾಜ್‌ (ಜೆಡಿಎಸ್‌-ಕಾಂಗ್ರೆಸ್‌), ಪಿ. ಗೌತಮ್‌ ಪ್ರಭು (ಶಿವಸೇನೆ), ಸುರೇಶ ಕುಂದರ್‌ (ಉ. ಪ್ರ.ಪಾರ್ಟಿ), ಶೇಖರ ಹಾವಂಜೆ (ಆರ್‌ಪಿಐ), ಅಮೃತ್‌ ಶೆಣೈ (ಪಕ್ಷೇತರ) ಹಾಗೂ ಕಾಪು ತಾಲೂಕಿನ ಅಬ್ದುಲ್‌ ರೆಹಮಾನ್‌ ಉಡುಪಿ ಜಿಲ್ಲೆಯ ಅಭ್ಯರ್ಥಿಗಳು. ಚಿಕ್ಕಮಗಳೂರು ತಾಲೂಕಿನ ಪಿ. ಪರಮೇಶ್ವರ (ಬಿಎಸ್‌ಪಿ), ವಿಜಯಕುಮಾರ್‌ (ಸಿಪಿಐ ಎಂಎಲ್‌ ರೆಡ್‌ಸ್ಟಾರ್‌); ನರಸಿಂಹರಾಜಪುರ ತಾಲೂಕಿನ ಎಂ.ಕೆ. ದಯಾನಂದ (ಪ್ರೌಟೆಸ್ಟ್‌ ಸರ್ವ ಸಮಾಜ), ಕೆ.ಪಿ. ಪ್ರಕಾಶ್‌; ಮೂಡಿಗೆರೆ ತಾಲೂಕಿನ ಎಂ.ಕೆ. ಗಣೇಶ ಚಿಕ್ಕಮಗಳೂರು ಜಿಲ್ಲೆಯವರು. ಪ್ರಬಲ ಪೈಪೋಟಿ ಒಡ್ಡಬಲ್ಲ ಅಭ್ಯರ್ಥಿಗಳು ಚಿಕ್ಕಮಗಳೂರು ಜಿಲ್ಲೆಯ ಮೂಲದಿಂದ ಕಂಡುಬರುತ್ತಿಲ್ಲ.

No Comments

Leave A Comment