Log In
BREAKING NEWS >
ಡಿಕೆ ಶಿವಕುಮಾರ್ ತಾಯಿ, ಪತ್ನಿಗೆ ಇ.ಡಿ ನೀಡಿದ್ದ ಸಮನ್ಸ್ ಗೆ ಹೈಕೋರ್ಟ್ ತಾತ್ಕಾಲಿಕ ತಡೆ...ಬರ, ನೆರೆ ಹಾವಳಿ ಹಿನ್ನಲೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲಾಗುವುದು: ಬಿ.ಶ್ರೀರಾಮುಲು...

ಪುಲ್ವಾಮಾ ಎನ್‌ಕೌಂಟರ್‌: 4 ಉಗ್ರರ ಹತ್ಯೆ, 3 ಸೈನಿಕರು, ಓರ್ವ ಪೊಲೀಸ್‌ಗೆ ಗಾಯ

ಶ್ರೀನಗರ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ, ಮೂವರು ಸೇನಾ ಜವಾನರು ಮತ್ತು ಓರ್ವ ಪೊಲೀಸ್‌ ಸಿಬಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ದಕ್ಷಿಣ ಕಾಶ್ಮೀರದ ಲಸ್ಸೀ ಪೋರಾ ಪ್ರದೇಶದಲ್ಲಿ ಉಗ್ರರು ಕಂಡು ಬಂದಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಇಡಿಯ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿದರು.

ಆಗ ಅವಿತುಕೊಂಡಿದ್ದ ಉಗ್ರರು ಸೇನೆಯೊಂದಿಗೆ ಗುಂಡಿನ ಚಕಮಕಿ ನಡೆಸಿದರು. ಉಗ್ರರ ಗುಂಡಿಗೆ ಸೇನೆ ತಕ್ಕುದಾದ ಉತ್ತರ ನೀಡಲು ಸೇನೆ ಮುಂದಾದಾಗ ಎನ್‌ಕೌಂಟರ್‌ ಘಟಿಸಿತು. ಈ ಎನ್‌ಕೌಂಟರ್‌ನಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಯಿತು.

ಹತ ಉಗ್ರರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ. ಉಗ್ರರ ಆರಂಭಿಕ ಗುಂಡಿನ ಚಕಮಕಿಯಲ್ಲಿ ಮೂವರು ಜವಾನರು ಮತ್ತು ಓರ್ವ ಪೊಲೀಸ್‌ ಸಿಬಂದಿ ಗಾಯಗೊಂಡರು.

ಹತ ಉಗ್ರರ ಬಳಿ ಇದ್ದ ಮದ್ದು ಗುಂಡು, ಶಸ್ತ್ರಾಸ್ತ್ರ, ದಾಖಲೆ ಪತ್ರಗಳು ಮುಂತಾದವುಗಳನ್ನು ಸ್ಥಳದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ವಕ್ತಾರ ತಿಳಿಸಿದ್ದಾರೆ.

No Comments

Leave A Comment