
ಮಂಗಳೂರಿನಲ್ಲಿ ಅಗ್ನಿ ಅವಘಡಕ್ಕೆ ತುತ್ತಾದ ಹಡಗಿನಿಂದ 46 ಜನರ ರಕ್ಷಣೆ
ಮಂಗಳೂರು: ಮಂಗಳೂರಿನಲ್ಲಿ ಸಂಶೋಧನಾ ಹಡಗಿನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕೂಡಲೇ ರಕ್ಷಣೆಗೆ ಧಾವಿಸಿದ ಕರಾವಳಿ ಭದ್ರತಾಪಡೆಗಳು ಹಡಗಿನಲ್ಲಿದ್ದ 46 ಮಂದಿಯನ್ನು ರಕ್ಷಿಸಿದ್ದಾರೆ.
ಇಲ್ಲಿನ ಸಮುದ್ರ ತೀರದಿಂದ 30 ಸಮುದ್ರ ಮೈಲಿ ದೂರದಲ್ಲಿ ಶುಕ್ರವಾರ ರಾತ್ರಿ ಅಗ್ನಿ ಹಡಗೊಂದು ಅಗ್ನಿ ಅವಘಡಕ್ಕೆ ತುತ್ತಾಗಿದ್ದು, ಅದರಲ್ಲಿದ್ದ 46 ಮಂದಿಯನ್ನು ಕರಾವಳಿ ಕಾವಲು ಪಡೆ ಪ್ರಾಣಾಪಾಯದಿಂದ ರಕ್ಷಿಸಿದೆ. ಶಿಪ್ಪಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾದ ‘ಸಾಗರ ಸಂಪದ’ ಸಂಶೋಧನಾ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, 30 ಸಿಬ್ಬಂದಿ ಹಾಗೂ 16 ಭಾರತೀಯ ಸಂಶೋಧನಾ ವಿಜ್ಞಾನಿಗಳು ಅದರಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.