Log In
BREAKING NEWS >
ಉಡುಪಿ ಶ್ರೀಕೃಷ್ಣಮಠ:ಸುವರ್ಣಗೋಪುರದ ಸಮರ್ಪಣೆ-ಬ್ರಹ್ಮಕಲಶೋತ್ಸವ ಕಾರ್ಯಕ್ರಮವು ಜೂನ್ 1ರಿ೦ದ 9ರವರೆಗೆ ಜರಗಲಿದೆ....

ಉಡುಪಿ: ಅದಾನಿ ಗ್ರೂಪ್ ನ ವಿದ್ಯುತ್ ಘಟಕ ವಿಸ್ತರಣೆಗೆ ಬ್ರೇಕ್, 5 ಕೋಟಿ ಪರಿಹಾರ ನೀಡಲು ಆಗ್ರಹ

ಉಡುಪಿ;ಜಿಲ್ಲೆಯ ಯೆಲ್ಲೂರು ಗ್ರಾಮದಲ್ಲಿ ಅದಾನಿ ಗ್ರೂಪ್ ನ ಉಡುಪಿ ಪವರ್ ಕಾರ್ಪೊರೇಷನ್ ಲಿಮಿಟೆಡ್(ಯುಪಿಸಿಎಲ್) ಗೆ ತೀವ್ರ ಹಿನ್ನಡೆಯಾಗಿದ್ದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಪ್ರಧಾನ ನ್ಯಾಯಪೀಠ 2017ರ ಆಗಸ್ಟ್ 1ರಂದು ಘಟಕವನ್ನು ವಿಸ್ತರಿಸುವಂತೆ ನೀಡಲಾಗಿದ್ದ ಪಾರಿಸರಿಕ ಅನುಮೋದನೆಯನ್ನು ರದ್ದುಪಡಿಸುವಂತೆ ಆದೇಶ ನೀಡಿದೆ.

2020ರ ವೇಳೆಗೆ 2,800 ಮೆಗಾವ್ಯಾಟ್ ಸಾಮರ್ಥ್ಯದವರೆಗೆ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಎರಡು 800 ಮೆಗಾ ವ್ಯಾಟ್ ಘಟಕವನ್ನು ಸ್ಥಾಪಿಸುವುದು ಪ್ರಸ್ತಾವನೆಯಾಗಿತ್ತು.

ವಿದ್ಯುತ್ ಘಟಕ ಸ್ಥಾಪನೆಯಿಂದ ಸುತ್ತಲಿನ ಪರಿಸರಕ್ಕೆ ಉಂಟಾಗಬಹುದಾದ ಹಾನಿ ಕುರಿತು ಪರಿಶೀಲಿಸಲು ನ್ಯಾಯಮಂಡಳಿ ತಜ್ಞರ ಸಮಿತಿಯನ್ನು ನೇಮಿಸಿತ್ತು. ಆಗಿರುವ ಹಾನಿ ಕುರಿತು ಅಧ್ಯಯನ ಮಾಡಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ 5 ಕೋಟಿ ರೂಪಾಯಿ ಮಧ್ಯಂತರ ಪಾರಿಸರಿಕ ಪರಿಹಾರ ನೀಡುವಂತೆ ಕಂಪೆನಿಗೆ ಆದೇಶ ನೀಡಿತ್ತು.

ಅರ್ಜಿದಾರರಾದ ಉಡುಪಿಯ ಜನಜಾಗೃತಿ ಸಮಿತಿಯ ಕಾರ್ಯಕಾರಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿಯವರಿಗೆ 1 ಲಕ್ಷ ರೂಪಾಯಿ ನೀಡಬೇಕೆಂದು ಸಹ ಆದೇಶ ನೀಡಿದೆ.

ಆದೇಶದ ವಿರುದ್ಧ ಕಂಪೆನಿಯ ತಜ್ಞರು ಸುಪ್ರೀಂ ಕೋರ್ಟ್ ಗೆ ಮೊರೆ ಹೋಗುವುದಾಗಿ ಯುಪಿಸಿಎಲ್ ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಗಿರೀಶ್ ನಾವಡ ತಿಳಿಸಿದ್ದಾರೆ.

No Comments

Leave A Comment