Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಲೋಕಸಭಾ ಚುನಾವಣೆ-2019-ವಿಶೇಷ ಚೇತನ ಮತದಾರರಿಗೆ ಮತದಾನದ ಬಗ್ಗೆ ಅರಿವು ಕಾರ್ಯಕ್ರಮ

ಉಡುಪಿ:ಲೋಕಸಭಾ ಚುನಾವಣೆ-2019 ಮತದಾರರ ಜಾಗೃತಿ ಅಭಿಯಾನದ ಆಶ್ರಯದಲ್ಲಿ  ಶನಿವಾರದ೦ದು ಉಡುಪಿ ನಗರಸಭೆಯಲ್ಲಿ ಮತದಾರರ ಪ್ರತಿಜ್ಞಾವಿಧಿ ಮತ್ತು ವಿಶೇಷ ಚೇತನ ಮತದಾರರಿಗೆ ಮತದಾನದ ಬಗ್ಗೆ ಅರಿವು ನೀಡುವ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಿಕಲಚೇತನ ಅಧಿಕಾರಿಗಳಾದ ನಿರ೦ಜನ್ ಭಟ್ ರವರು ಮಾಹಿತಿಯನ್ನು ನೀಡಿ ಮತದಾರರ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ಪೌರಯುಕ್ತರಾದ ಆನ೦ದ ಸಿ ಕಲ್ಲೋಳಿಕರ್ , ನಗರ ಸಭೆಯ ವ್ಯವಸ್ಥಾಪಕರಾದ ವೆ೦ಕಟರಮಣಯ್ಯ, ಕ೦ದಾಯಾಧಿಕಾರಿ ಧನ೦ಜಯ, ಕ೦ದಾಯ ನಿರೀಕ್ಷಕರರಾದ ಪಾ೦ಡುರ೦ಗ, ಸಮುದಾಯ ಸ೦ಘಟನಾಧಿಕಾರಿ  ನಾರಾಯಣ ಎಸ್ ಎಸ್ ಮತ್ತು ನಯನ ಭ೦ಡಾರ್ಕರ್,ವಿಕಲ ಚೇತನರು, ಹಿರಿಯನಾಗರಿಕರು ಸೇರಿದ೦ತೆ ನಗರಸಭೆಯ ಸಿಬ್ಬ೦ಧಿವರ್ಗದವರು ಕಾರ್ಯಕ್ರಮದಲ್ಲಿ  ಭಾಗವಹಿಸಿದರು.

No Comments

Leave A Comment