Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಗುಂಡಿನ ದಾಳಿ ಹಿನ್ನಲೆ : ಬಾಂಗ್ಲಾ ತಂಡ ತವರಿಗೆ

ಕ್ರೈಸ್ಟ್‌ಚರ್ಚ್‌: ನ್ಯೂಝಿಲ್ಯಾಂಡಿನ ಎರಡು ಕಡೆಗಳಲ್ಲಿ ನಡೆದ ಗುಂಡಿನ ದಾಳಿ ಪ್ರಕರಣದ ಹಿನ್ನಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟ್‌ ತಂಡವು ತನ್ನ ನ್ಯೂಝಿಲ್ಯಾಂಡ್‌ ಪ್ರವಾಸವನ್ನು ರದ್ದುಪಡಿಸಿದೆ. ಪ್ರವಾಸಿ ಬಾಂಗ್ಲಾ ಮತ್ತು ಆತಿಥೇಯ ನ್ಯೂಝಿಲ್ಯಾಂಡ್‌ ನಡುವೆ ಪ್ರಥಮ ಟೆಸ್ಟ್‌ ಪಂದ್ಯವು ಶನಿವಾರದಂದು ಹೇಗ್ಲೀ ಓವಲ್‌ ನಲ್ಲಿ ಪ್ರಾರಭಗೊಳ್ಳಬೇಕಿತ್ತು.

ಶುಕ್ರವಾರದಂದು ಕ್ರೈಸ್ಟ್‌ ಚರ್ಚ್‌ನಲ್ಲಿರುವ ಎರಡು ಮಸೀದಿಗಳ ಮೇಲೆ ಆಗಂತುಕರು ಗುಂಡಿನನ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಇದುವರೆಗಿನ ವರದಿಯಂತೆ ಕನಿಷ್ಠ 27 ಜನರು ಮೃತಪಟ್ಟಿದ್ದಾರೆ ಮತ್ತು 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸಂದರ್ಭದಲ್ಲಿ ಬಾಂಗ್ಲಾ ಕ್ರಿಕೆಟಿಗರು ಹೇಗ್ಲೆà ಪಾರ್ಕ್‌ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದರು ಮತ್ತು ಈ ಘಟನೆಯಿಂದ ಕೂದಲೆಲೆ ಅಂತರದಿಂದ ಬಚಾವಾಗಿದ್ದರು.

ಬಾಂಗ್ಲಾ ಕ್ರಿಕೆಟಿಗ ಈ ಘಟನೆಯನ್ನು ಭೀಕರ ಎಂದು ಬಣ್ಣಿಸಿದ್ದರು. ಇನ್ನೋರ್ವ ಕ್ರಿಕೆಟಿಗ ಮುಷ್ಫೀಕರ್‌ ರಹೀಂ ಅವರು ಸರ್ವಶಕ್ತ ಅಲ್ಲಾಹುವಿನ ಕೃಪೆಯಿಂದ ನಾವಿವತ್ತು ಸುರಕ್ಷಿತವಾಗಿದ್ದೇವೆ ಎಂದು ಟ್ವೀಟ್‌ ಮಾಡಿದ್ದರು.

No Comments

Leave A Comment