Log In
BREAKING NEWS >
ಮೇ 29ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕಾರ....ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ: ಸುಮಲತಾ ಅಂಬರೀಶ್....

ಕಾಲುವೆಗೆ ಉರುಳಿ ಬಿದ್ದ ಕಾರು: ಒಂದೇ ಕುಟುಂಬದ 6 ಮಂದಿ ಸಾವು

ಕೊಯಮುತ್ತೂರು : ಪೊಲ್ಲಾಚಿ ಸಮೀಪ ಇಂದು ಬುಧವಾರ ನಸುಕಿನ ವೇಳೆ ಕಾರೊಂದು ಕಾಲುವೆಗೆ ಉರುಳಿ ಬಿದ್ದ  ಅವಘಡದಲ್ಲಿ ಕಾರಿನೊಳಗಿದ್ದ ಒಂದೇ ಕುಟುಂಬದ ಎಲ್ಲ ಆರು ಮಂದಿ ಜಲ ಸಮಾಧಿಯಾದರು.

ಕಾರಿನಲ್ಲಿದ್ದ  ನತದೃಷ್ಟರು ಪಳನಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಹುಟ್ಟೂರಾದ, ನಗರದ ಮಸಕಳಿಪಾಳಯಂ ಗೆ ಮರಳುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ ಕಾರು ಕೇದಿಮೇಡು ಎಂಬಲ್ಲಿ ಕಾಲುವೆಗೆ ಉರುಳಿ ಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಹಿರಿಯ ಜಿಲ್ಲಾ ಮತ್ತು ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಮೃತ ದೇಹಗಳನ್ನು ಕಾಲುವೆಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿದೆ ಎಂದವರು ಹೇಳಿದ್ದಾರೆ.

No Comments

Leave A Comment