Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

ಚೀನ ನೌಕಾ ಪಡೆ ವಿಮಾನ ಪತನ: ಇಬ್ಬರೂ ಪೈಲಟ್‌ಗಳ ಸಾವು

ಬೀಜಿಂಗ್‌ : ದಕ್ಷಿಣ ಚೀನದ ಹೈನಾನ್‌ ಪ್ರಾಂತ್ಯದ ದ್ವೀಪವೊಂದರಲ್ಲಿ ತರಬೇತಿ ಹಾರಾಟದಲ್ಲಿದ್ದ ನೌಕಾ ಪಡೆಯ ವಿಮಾನವೊಂದು ಇಂದು ಮಂಗಳವಾರ ಪತನಗೊಂಡು ಅದರ ಇಬ್ಬರೂ ಪೈಲಟ್‌ಗಳು ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ದಕ್ಷಿಣ ದ್ವೀಪ ಪ್ರಾಂತ್ಯದಲ್ಲಿ  ಈ ವಿಮಾನ ಪತನಗೊಂಡಾಗ ಸ್ಥಳೀಯರು ಯಾರೂ ಮೃತಪಟ್ಟಿಲ್ಲ ಎಂದು ಚೀನದ ನೌಕಾ ಪಡೆ ಮೂಲಗಳು ಹೇಳಿವೆ.

ವಿಮಾನ ಪತನದ ಕಾರಣ ತಿಳಿಯಲು ಯತ್ನಿಸಲಾಗುತ್ತಿದ್ದು ತನಿಖೆ ನಡೆಯುತ್ತಿದೆ ಎಂದು ನೌಕಾ ಪಡೆ ಹೇಳಿಕೆ ತಿಳಿಸಿದೆ.

No Comments

Leave A Comment