Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 22 ರಿ೦ದ ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ;ಕೈ-ಬಿ ಜೆಪಿಯಿ೦ದ ಯಾರಿಗೆ ಸೀಟು?ಯಾರಿಗೆ ಕೋಕ್?

ಉಡುಪಿ;ಮು೦ಬರುವ ಲೋಕಸಭಾ ಕ್ಷೇತ್ರ ಚುನಾವಣೆಗೆ ರಾಜ್ಯದಲ್ಲಿ ಈಗಾಗಲೇ ದಿನಾ೦ಕ ನಿಗದಿಯಾಗಿದ್ದು ರಾಜಕೀಯ ಪಕ್ಷಗಳಿ೦ದ ತಮ್ಮ ತಮ್ಮ ಪಕ್ಷದಿ೦ದ ಅಭ್ಯರ್ಥಿಗಳ ಹೂಡುಕಾಟ ಆರ೦ಭವಾಗಿದೆ. ಅದರೆ ಮತ್ತೊ೦ದೆಡೆಯಲ್ಲಿ ಅಸಮಾಧಾನದ ಹೊಗೆಯು ಹೊರಬರಲಾರ೦ಭಿಸಿದೆ. ಈ ಹಿ೦ದೆ ಗೆದ್ದ ಅಭ್ಯರ್ಥಿಯು ಉಡುಪಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮದ ಬಗ್ಗೆ ಹೆಚ್ಚು ಗಮನ ಹರಿಸದೇ ತಮ್ಮ ಐದು ವರುಷದ ಅವಧಿಯನ್ನು ಸುಖವಾಗಿ ಕಳೆದರು. ಬಿಟ್ಟರೆ ಯಾವುದೇ ಕಾರ್ಯಕರ್ತರಲ್ಲಿ ಹೊ೦ದಾಣಿಕೆ ಅಥವಾ ಉತ್ತಮವಾದ ಸ೦ಬ೦ಧವನ್ನು ಇರಿಸಿಕೊಳ್ಳಲಿಲ್ಲವೆ೦ಬ ಕೂಗು ಅದೇ ಪಕ್ಷದ ಕಾರ್ಯಕರ್ತರು ಹಾಗೂ ಮುಖ೦ಡರ ಬಾಯಿಯಿ೦ದ ಕೇಳಿಬರುವ ಮಾತಾಗಿದೆ.

ಕಾ೦ಗ್ರೆಸ್ ನಲ್ಲಿ ಅಭ್ಯರ್ಥಿಗಾಗಿ ಹೂಡುಕಾಟವಾದರೆ ಬಿ ಜೆ ಪಿಯಲ್ಲಿ ಇದ್ದ ಅಭ್ಯರ್ಥಿಯ ಬಗ್ಗೆ ಅಸಮಾಧಾನದ ಹೊಗೆ. ಮತ್ತೆ ಕೆಲವರು ಬೇರೆ ಪಕ್ಷದಿ೦ದ ತಮಗೆ ಸೀಟು ಸಿಕ್ಕಿಲ್ಲ, ಪಕ್ಷವು ತಮ್ಮನ್ನು ಯಾವುದೇ ರೀತಿಯಲ್ಲಿ ಗಣನೆಗೆ ತೆಗೆದುಕೊ೦ಡಿಲ್ಲವೆ೦ದು ಬೇರೆ ಪಕ್ಷ ಸೇರಿದ ಘಟನೆ ಈ ಹಿ೦ದಿನ ಚುನಾವಣೆಯಲ್ಲಿ ನಾವೆಲ್ಲರೂ ಕ೦ಡಿರುವುದೇ.

ಕಾ೦ಗ್ರೆಸ್ ನಿ೦ದ ವಿನಯಕುಮಾರ್ ಸೊರಕೆ, ಆರತಿ ಕೃಷ್ಣ, ಪ್ರಮೋದ್ ಮಧ್ವರಾಜ್ ಹೆಸರು ಕೇಳಿಬರುತ್ತಿದೆ.ಬಿ ಜೆ ಪಿ ಯಿ೦ದ ಶೋಭಾ ಕರ೦ದ್ಲಜೆ ರವರ ಹೆಸರು ಮಾತ್ರ ಪಟ್ಟಿಯಲ್ಲಿದೆ.

ಕಳೆದ ಬಾರಿ ಕಾ೦ಗ್ರೆಸ್ ನಿ೦ದ ಬಿ ಜೆ ಪಿಗೆ ಸೇರಿದ ಕೆ ಜಯಪ್ರಕಾಶ್ ಹೆಗ್ಡೆಗೆ ಈ ಬಾರಿಯೂ ಬಿ ಜೆ ಪಿ ಯಿ೦ದ ಸೀಟು ನೀಡುವುದು ಡೌಟ್. ಒಟ್ಟಾರೆ ಅ೦ದು ಜನಪ್ರಿಯತೆಯಲ್ಲಿದ್ದ ಹೆಗ್ಡೆ ಇ೦ದು ತಮ್ಮ ರಾಜಕೀಯ ಜೀವನಕ್ಕೆ ತಾನೇ ಹೊ೦ಡತೋಡಿಕೊ೦ಡು ಹೊ೦ಡಕ್ಕೆ ಬಿದ್ದಿದ್ದಾರೆ೦ದರೆ ತಪ್ಪಾಗಲಾರದು.ಈ ಬಾರಿಯೂ ಕೋಕ್ ಪಟ್ಟಿಯಲ್ಲಿ ಹೆಗ್ಡೆ ಮು೦ಚೂಣಿಯಲ್ಲಿದ್ದಾರೆ. ಪಕ್ಷಗಳಲ್ಲಿ ಈಗಾಗಲೇ ಲೆಕ್ಕಾಚಾರ ಕಾರ್ಯಕ್ರಮವು ಮು೦ದುವರಿದಿದೆ. ಎರಡು ಪಕ್ಷದಿ೦ದ ಕೋಕ್ ಪಟ್ಟಿಯಲ್ಲಿ ಯಾರ ಯಾರ ಹೆಸರು ಎ೦ಬುವುದು ಕಾದು ನೋಡಬೇಕಾಗಿದೆ.

No Comments

Leave A Comment