Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಉಡುಪಿ-ಚಿಕ್ಕಮಗಳೂರು 14.94 ಲಕ್ಷ ಮತದಾರರು

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ 14,94,443 ಮತದಾರರು ಇದ್ದಾರೆ. ಇವರಲ್ಲಿ 7,30,288 ಪುರುಷರು, 7,64,105 ಮಹಿಳೆಯರು ಮತ್ತು 50 ಮಂದಿ ಇತರರು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಎಸ್‌ಪಿ ನಿಶಾ ಜೇಮ್ಸ್‌, ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿ.ಪಂ. ಸಿಇಒ ಸಿಂಧೂ ರೂಪೇಶ್‌, ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಉಪಸ್ಥಿತರಿದ್ದರು.

ಸಹಾಯಕ ಚುನಾವಣಾಧಿಕಾರಿಗಳು
ಕುಂದಾಪುರ- ಕುಂದಾಪುರ ಸಹಾಯಕ ಕಮಿಷನರ್‌ ಡಾ| ಎಸ್‌.ಎಸ್‌. ಮಧುಕೇಶ್ವರ, ಉಡುಪಿ – ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಕಾಪು- ಆಹಾರ ಇಲಾಖೆ ಉಪನಿರ್ದೇಶಕ ಡಾ| ನಾಗರಾಜ್‌, ಕಾರ್ಕಳ – ಸಂತೋಷ ಕುಮಾರ್‌, ಶೃಂಗೇರಿ – ಜಿ.ಪಂ. ಯೋಜನಾಧಿಕಾರಿ ನಾಗರಾಜ್‌, ಮೂಡಿಗೆರೆ- ಚಿಕ್ಕಮಗಳೂರು ಸಹಾಯಕ ಕಮಿಷನರ್‌ ಶಿವಕುಮಾರ್‌ ಕೆ.ಎಚ್‌., ಚಿಕ್ಕಮಗಳೂರು- ಜಿ.ಪಂ. ಉಪಕಾರ್ಯದರ್ಶಿ ವಿ.ಎಸ್‌. ಹಿರೇಮಠ, ತರಿಕೆರೆ- ತರಿಕೆರೆ ಸಹಾಯಕ ಕಮಿಷನರ್‌.

ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ಉಡುಪಿ ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆಯ ಉಸ್ತುವಾರಿಯನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿಯವರು ನೋಡಿಕೊಳ್ಳುತ್ತಾರೆ.

ನೀತಿ ಸಂಹಿತೆ ಜಾರಿ
ಚುನಾವಣಾ ಆಯೋಗದ ನಿರ್ದೇಶನದಂತೆ ಮಾ. 10ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲೆಯ ಸಾಮಾಜಿಕ ಅರಣ್ಯ ಉಪಸಂರಕ್ಷಣಾಧಿಕಾರಿ ಭಾಸ್ಕರ ಬಿ. ಅವರನ್ನು ನೋಡಲ್‌ ಅಧಿಕಾರಿಯಾಗಿ ನಿಯೋಜಿಸಲಾಗಿದೆ.

No Comments

Leave A Comment