Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಅರ್ಧದಲ್ಲೇ ವೇಷ ಮುಗಿಸಿದ ಹುಡುಗೋಡು ಚಂದ್ರಹಾಸ

ಉಡುಪಿ:ಬಡಗುತಿಟ್ಟಿನ ಪ್ರಸಿದ್ಧ ಕಲಾವಿದ ಹುಡುಗೋಡು ಚಂದ್ರಹಾಸ ನಾಯ್ಕ (52) ನಿನ್ನೆ (10-03-2019) ಬೈಂದೂರ್ ಸಮೀಪ ಎಳಜಿತ್‍ನಲ್ಲಿ ಅವರ ಇಷ್ಟದ ವೇಷವಾದ ಸಾಲ್ವನ ಪಾತ್ರದಲ್ಲಿ ಅಭಿನಯಿಸುತ್ತಿರುವಾಗಲೇ ರಂಗದಲ್ಲಿ ಕುಸಿದು ನಿಧನ ಹೊಂದಿದರು.

ಗೋಳಿಗರಡಿ, ಗುಂಡುಬಾಳ, ಕಳವಾಡಿ, ನಾಗರಕೋಡಿಗೆ, ಕಮಲ ಶಿಲೆ, ಬಚ್ಚಗಾರು, ಸಿರ್ಸಿ, ಕುಮಟಾ, ಅಮೃತೇಶ್ವರಿ, ಪೆರ್ಡೂರು ಮೇಳಗಳಲ್ಲಿ ಮೂರು ದಶಕಗಳ ಕಲಾಸೇವೆ ಗೈದಿದ್ದರು. ಖಳ ಪಾತ್ರಗಳ ನಿರ್ವಹಣೆಯಲ್ಲಿ ವಿಶೇಷ ಪ್ರಸಿದ್ಧಿ ಪಡೆದಿದ್ದರು.

ಕಳೆದ ಕೆಲವು ವರ್ಷಗಳಿಂದ ಕಲಾಶ್ರೀ ಬಳಗ ಕಟ್ಟಿ ಆಟವಹಿಸಿಕೊಳ್ಳುತ್ತಿದ್ದರು. ಪ್ರಸಕ್ತ ಪಂಚಾಯತ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಅವರು ಪತ್ನಿ ಇಬ್ಬರು ಪುತ್ರರು ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.

No Comments

Leave A Comment