Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ರುಸ್ತುಂ ಸಿನಿಮಾಗಾಗಿ ರೋಮ್ಯಾಂಟಿಕ್ ಸಾಂಗ್ ನಲ್ಲಿ ಶಿವರಾಜ್ ಕುಮಾರ್ ಮತ್ತು ಶ್ರದ್ಧಾ ಶ್ರೀನಾಥ್ ಡ್ಯಾನ್ಸ್

ರುಸ್ತುಂ ಸಿನಿಮಾಗಾಗಿ ನಟ ಶಿವರಾಜ್ ಕುಮಾರ್ ರೊಮ್ಯಾಂಟಿಕ್ ಸಾಂಗ್ ಗೆ ಹೆಜ್ಜೆ ಹಾಕುವ ಮೂಲಕ ಶೂಟಿಂಗ್ ಪೂರ್ಣಗೊಲಿಸಲು ಮುಂದಾಗಿದ್ದಾರೆ, ಸ್ಟಂಟ್ ಮಾಸ್ಟರ್ ರವಿ ವರ್ಮಾ ನಿರ್ದೇಶನದ ಮೊದಲ ಸಿನಿಮಾವಾಗಿದೆ.

ಕಂಠೀರವ ಸ್ಟುಡಿಯೋದಲ್ಲಿ ಹಾಕಿದ್ದ ದೊಡ್ಡ ಸೆಟ್ ನಲ್ಲಿ ಶ್ರದ್ಧಾ ಶ್ರೀನಾಥ್ ಮತ್ತು ಶಿವರಾಜ್ ಕುಮಾರ್, ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಅನೂಪ್ ಸಿಳೀನ್ ಸಂಗೀತ ನಿರ್ದೇಶನದ ಹಾಡು ಇದಾಗಿದೆ, ಆರು ದಿನಗಳ ಶೂಟಿಂಗ್ ಇದಾಗಿದ್ದು, ಈ ವಾರದಲ್ಲಿ ಪೂರ್ಣಗೊಳ್ಳಲಿದೆ.

ಇದೇ ವೇಳೆ ರುಸ್ತುಂ ಸೆಟ್ ಗೆ ನಟ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದ್ದರು,.ಜಯಣ್ಣ-ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ವಿವೇಕ್ ಒಬೆರಾಯ್ ಮತ್ತು ರಚಿತಾ ರಾಮ್ ನಟಿಸಿದ್ದಾರೆ.

No Comments

Leave A Comment