Log In
BREAKING NEWS >
ಕೊರೋನಾ ವೈರಸ್: ಸಾವಿನ ಸಂಖ್ಯೆ 80ಕ್ಕೆ ಏರಿಕೆ: ಭಾರತೀಯರು ಸೋಂಕುವಿಗೆ ತುತ್ತಾಗಿಲ್ಲ: ಎಂಇಎ...

ಭಾರತ ಮೂಲದ ಮೂವರಿಗೆ ಪ್ರಶಸ್ತಿ

ಲಂಡನ್‌: ರಾಜಕೀಯ ಹಾಗೂ ಸಾರ್ವಜನಿಕ ಜೀವನದಲ್ಲಿ ಗುರುತರ ಸಾಧನೆ ಮಾಡಿದ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಬ್ರಿಟನ್‌ನ ವಾರ ಪತ್ರಿಕೆ “ಏಷ್ಯನ್‌ ವಾಯ್ಸ’ ನೀಡುವ ಮೂರು ಪ್ರಮುಖ ಪ್ರಶಸ್ತಿಗಳು, ಈ ಬಾರಿ ಭಾರತ ಮೂಲದ ಮೂವರಿಗೆ ಸಂದಿದೆ. ಯು.ಕೆ. ಸಂಸದೆ ಪ್ರೀತಿ ಪಟೇಲ್‌ಗೆ “ವರ್ಷದ ಸಂಸದೆ’ ಪ್ರಶಸ್ತಿ, ಲಂಡನ್‌  ಮೇಯರ್‌ ಸಾದಿಕ್‌ ಖಾನ್‌ಗೆ “ವರ್ಷದ ರಾಜಕಾರಣಿ’ ಪ್ರಶಸ್ತಿ ಲಭಿಸಿದ್ದರೆ, ಭಾರತ ಮೂಲದ ಹಾಸ್ಯ ನಟ ಪಾಲ್‌ ಚೌಧರಿಗೆ “ವರ್ಷದ ಶ್ರೇಷ್ಠ ಹಾಸ್ಯನಟ’ ಪ್ರಶಸ್ತಿ ನೀಡಲಾಗಿದೆ.

 ಯು.ಕೆ. ಸಂಸತ್ತಿನ ಸಭಾಂಗಣದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇದೇ ವೇಳೆ, “ಅತ್ಯುತ್ತಮ ಅಂತಾರಾಷ್ಟ್ರೀಯ ಹೋಟೆಲ್‌’ ಪ್ರಶಸ್ತಿಗೆ ಭಾರತದ ಲೀಲಾ ಪ್ಯಾಲೇಸ್‌, ಲಂಡನ್‌  ನಲ್ಲಿರುವ ಡೆಲ್ಲಿ ಸ್ಟ್ರೀಟ್‌ ಫ‌ುಟ್‌ಗೆ “ವರ್ಷದ ರೆಸ್ಟೋರೆಂಟ್‌’ ಪ್ರಶಸ್ತಿ ಲಭಿಸಿವೆ.

No Comments

Leave A Comment