Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

150 ಜನರಿದ್ದ ಇಥಿಯೋಪಿಯಾ ವಿಮಾನ ಪತನ

ನವದೆಹಲಿ: ಇಥಿಯೋಪಿಯಾದ ರಾಜಧಾನಿ ಅಡೀಸ್‌ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ಇಥಿಯೋಪಿಯನ್‌ ಪ್ರಯಾಣಿಕರ ವಿಮಾನವೊಂದು ಪತನಗೊಂಡಿರುವ ಕುರಿತಾಗಿ ಮಾಹಿತಿ ಲಭ್ಯವಾಗಿದೆ. ಈ ವಿಮಾನದಲ್ಲಿ 150 ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿಗಳಿದ್ದರೆಂದು ಪ್ರಾಥಮಿಕ ಮಾಹಿತಿ ಲಭಿಸಿದೆ.

ಈ ಪ್ರಯಾಣಿಕರ ವಿಮಾನವು ಪತನಗೊಂಡಿರುವುದನ್ನು ಇಥಿಯೋಪಿಯಾದ ಪ್ರಧಾನಮಂತ್ರಿಗಳ ಕಾರ್ಯಾಲಯವು ದೃಢಪಡಿಸಿದೆ ಮತ್ತು ವಿಮಾನದಲ್ಲಿ ಪ್ರಯಾನಿಸುತ್ತಿದ್ದವೆರೆಲ್ಲಾ ಸಾವಿಗೀಡಾಗಿರಬಹುದಾದ ಭೀತಿಯನ್ನು ಅದು ವ್ಯಕ್ತಪಡಿಸಿದೆ.

ಇಥಿಯೋಪಿಯಾದ ರಾಜಧಾನಿಯಿಂದ 62 ಕಿಲೋಮೀಟರ್‌ ಗಳಷ್ಟು ದೂರದಲ್ಲಿರುವ ಬಿಶೋಫ್ತು ಎಂಬಲ್ಲಿ ಈ ವಿಮಾನವು ಪತನಗೊಂಡಿದೆ ಎನ್ನಲಾಗುತ್ತಿದೆ. ‘ಅಡೀಸ್‌ ಅಬಾಬಾದಿಂದ ಸ್ಥಳೀಯ ಕಾಲಮಾನ 8.38ಕ್ಕೆ ಪ್ರಯಾಣ ಬೆಳೆಸಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ವಿಮಾನವು 8.44ರ ಸುಮಾರಿಗೆ ತನ್ನ ಸಂಪರ್ಕವನ್ನು ಕಳೆದುಕೊಂಡಿದೆ.

ಈ ವಿಮಾನದಲ್ಲಿ 149 ಪ್ರಯಾಣಿಕರು ಮತ್ತು 8ಜನ ಸಿಬ್ಬಂದಿಗಳಿದ್ದರೆಂದು ನಂಬಲಾಗುತ್ತಿದೆ. ದುರ್ಘ‌ಟನಾ ಸ್ಥಳದಲ್ಲಿ ಪರಿಹಾರ ಮತ್ತು ಹುಡುಕಾಟ ಕಾರ್ಯಾಚರಣೆ ಭರದಿಂದ ಸಾಗಿದೆ’ ಎಂದು ಇಥಿಯೋಪಿಯನ್‌ ಏರ್‌ ಲೈನ್ಸ್‌ ತಾನು ಬಿಡುಗಡೆಗೊಳಿಸಿರುವ ಪ್ರಕಟನೆಯಲ್ಲಿ ತಿಳಿಸಿದೆ.

No Comments

Leave A Comment