Log In
BREAKING NEWS >
ಕೊರ೦ಗ್ರಪಾಡಿಯಲ್ಲಿ ರಿಕ್ಷಾ ಬಸ್ ಡಿಕ್ಕಿ-ಶಾಲಾ ಮಗು ಮತ್ತು ಚಾಲಕ ಗ೦ಭೀರ....ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

ಗುಂಡು ತಗುಲಿ ಚಿಕ್ಕೋಡಿ ಯೋಧ ಸಾವು

ಚಿಕ್ಕೋಡಿ: ತರಬೇತಿ ಸಂದರ್ಭದಲ್ಲಿ ಆಕಸ್ಮಿಕ ಗುಂಡು ತಗುಲಿ ತಾಲೂಕಿನ ಚೆಂದೂರ ಗ್ರಾಮದ ಯೋಧ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಪ್ರವೀಣ ಸುಕುಮಾರ ಪಟ್ಟಣ ಕುಡಿ (35) ಮೃತ ಯೋಧ. ಇವರು ಪಂಜಾಬಿನ 71 ಆರ್ಮಡ್‌ ರೇಜಿಮೆಂಟ್‌ನಲ್ಲಿ ಶುಕ್ರವಾರ ಗುಂಡಿನ ಅಭ್ಯಾಸದಲ್ಲಿ ತೊಡಗಿದ್ದಾಗ ಆಕಸ್ಮಿಕ ವಾಗಿ ಗುಂಡು ತಗುಲಿತು. ಕಳೆದ 15 ವರ್ಷ ಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರವೀಣ, ಇನ್ನೆರಡು ವರ್ಷದಲ್ಲಿ ನಿವೃತ್ತಿಯಾ ಗಲಿದ್ದರು. ಮೃತ ಯೋಧ ತಂದೆ, ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ವೀರಯೋಧನ ಪಾರ್ಥಿವ ಶರೀರ ಪುಣೆ ಮಾರ್ಗ ವಾಗಿ ಭಾನುವಾರ ಬೆಳಗ್ಗೆ ಗ್ರಾಮಕ್ಕೆ ಆಗಮಿಸಲಿದ್ದು, ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

No Comments

Leave A Comment