Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಬೆಂಗಳೂರು: ಶಾಲೆಯ ಪ್ರಾಂಶುಪಾಲರಿಂದ ನಿಂದನೆ; ಮನನೊಂದು ಶಿಕ್ಷಕಿ ಆತ್ಮಹತ್ಯೆ

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಶಾಲೆಯ ಪ್ರಾಂಶುಪಾಲರು ಬೈದದ್ದಕ್ಕೆ ಮನನೊಂದ ಶಿಕ್ಷಕಿಯೊಬ್ಬರು ಮನೆಯ ಸೀಲಿಂಗ್ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಾಳೇನ ಅಗ್ರಹಾರದ ಚರ್ಚ್ ರೋಡ್  ನಿವಾಸಿ ಮದಲೀನಾ  ಬನ್ನೇರು ಘಟ್ಟ ರಸ್ತೆಯಲ್ಲಿರುವ ಖಾಸಗಿ ಶಾಲೆಯಲ್ಲಿ ಇಂಗ್ಲೀಷ್ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು, ಎಲ್ ಕೆಜಿ ಯಿಂದ 3ನೇ ತರಗತಿ ವರೆಗೆ ಪಾಠ ಹೇಳಿ ಕೊಡುತ್ತಿದ್ದರು. ಕಳೆದ ಶುಕ್ರವಾರ 2.30ಕ್ಕೆ ಮನೆಗೆ ಅಳುತ್ತಾ ಬಂದರು. ಮಾರ್ಚ್ 1 ರಂದು ಮನೆಯ ಸೀಲಿಂಗ್ ಪ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪತಿ ಫ್ರಾನ್ಸಿಸ್ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತನ್ನ ಚೇಂಬರಿಗೆ ಕರೆದ ಪ್ರಾಂಶುಪಾಲರು ಮಕ್ಕಳಿಗೆ ಸರಿಯಾಗಿ ಪಾಠ ಮಾಡುತ್ತಿಲ್ಲ ಎಂದು ಬೈಯ್ದಿದ್ದಾರೆ. ಸಣ್ಣ ಮಕ್ಕಳಿಗೆ ಪಾಠ ಹೇಳಿಕೊಡಲು ಬರುವುದಿಲ್ಲ ಎಂದ ಮೇಲೆ ಬದುಕುವ ಬದಲು ಎಲ್ಲಾದರೂ ಹೋಗಿ ಸಾಯಿ ಎಂದು  ನಿಂದಿಸಿದ್ದಾಗಿ ತನ್ನ ಬಳಿ ಹೇಳಿದ್ದಾಗಿ ಆಕೆಯ ಪತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಫ್ರಾನ್ಸಿಸ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದರು, ಆತನ ಅನಾರೋಗ್ಯದ ಕಾರಣ ಮದಲೀನಾ ಶಾಲೆಯಲ್ಲಿ ಕೆಲಸ ಮಾಡಲು ಆರಂಭಿಸಿದ್ದರು, ಪ್ರಾಂಶುಪಾಲರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗುವುದು ಎಂದು ತನಿಖಾಧಿಕಾರಿ ತಿಳಿಸಿದ್ದಾರೆ.

No Comments

Leave A Comment