Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ರಫೆಲ್ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ಸೇರಿ ಪ್ರತಿಯೊಬ್ಬರನ್ನೂ ತನಿಖೆ ಮಾಡಿ: ರಾಹುಲ್ ಗಾಂಧಿ ಆಗ್ರಹ

ನವದೆಹಲಿ: ರಫೆಲ್ ಯುದ್ಧ ವಿಮಾನ ಒಪ್ಪಂದ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ರಕ್ಷಿಸಲು ಸರ್ಕಾರದ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಫೆಲ್ ಒಪ್ಪಂದದ ದಾಖಲೆಗಳ ಕಳವಿನ ಬಗ್ಗೆ ಮಾಧ್ಯಮಗಳನ್ನು ತನಿಖೆ ಮಾಡುವುದಾಗಿ ಹೇಳುವ ಸರ್ಕಾರ 30 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾಗಿರುವವರ ವಿರುದ್ಧ ತನಿಖೆ ಮಾಡುವುದಿಲ್ಲ.ನ್ಯಾಯ ಎಲ್ಲರಿಗೂ ಸಿಗಬೇಕು. ಪ್ರತಿಯೊಬ್ಬರನ್ನೂ ತನಿಖೆ ಮಾಡಿ. ಮೋದಿಯವರ ವಿರುದ್ಧ ಕೂಡ ತನಿಖೆಯಾಗಲಿ, ನ್ಯಾಯ ಎಲ್ಲರಿಗೂ ಸಿಗಬೇಕು ಎಂದು ಒತ್ತಾಯಿಸಿದರು.

 

 

ರಕ್ಷಣಾ ಸಚಿವಾಲಯದಿಂದ ರಫೆಲ್ ದಾಖಲೆಗಳು ಕಳವಾಗಿದೆ ಎಂದು ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ಸರ್ಕಾರದ ಪರ ವಕೀಲ ಕೆ ಕೆ ವೇಣುಗೋಪಾಲ್ ವಿರುದ್ಧವೂ ಆರೋಪಗಳ ಸುರಿಮಳೆಗೈದ ರಾಹುಲ್ ಗಾಂಧಿ, ಗಾಯಬ್ ಹೋ ಗಯಾ ಎಂಬುದು ಮೋದಿ ಸರ್ಕಾರದ ಹೊಸ ಟ್ಯಾಗ್ ಲೈನ್ ಆಗಿದೆ. ಯುವಕರಿಗೆ ಉದ್ಯೋಗದ ಅವಕಾಶ, ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ, ಪ್ರತಿಯೊಬ್ಬರಿಗೂ 15 ಲಕ್ಷ ರೂಪಾಯಿ ನೀಡುವ ಭರವಸೆ, ರೈತರ ವಿಮೆ, ನೋಟುಗಳ ಅನಾಣ್ಯೀಕರಣದ ನಂತರ ಕಪ್ಪು ಹಣ ಹಿಂತೆಗೆದುಕೊಳ್ಳುವಿಕೆ ಮತ್ತು ದೋಕ್ಲಮ್ ಇತ್ಯಾದಿ ಭರವಸೆಯಾಗಿಯೇ ಉಳಿದಿವೆ ಎಂದರು.

ಪ್ರಧಾನಿ ಮೋದಿ ಸಹಿತ ಈ ಒಪ್ಪಂದದ ಹಿಂದೆ ಕೇಳಿಬರುತ್ತಿರುವ ಪ್ರತಿಯೊಬ್ಬರನ್ನು ಕೂಡ ತನಿಖೆ ಮಾಡಬೇಕು ಎಂದು ದೆಹಲಿಯಲ್ಲಿ ಇಂದು ರಾಹುಲ್ ಗಾಂಧಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು. ಪ್ರಧಾನಿಯವರು ಬೈಪಾಸ್ ಸರ್ಜರಿ ರೀತಿ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿದ್ದು ಉದ್ಯಮಿ ಅನಿಲ್ ಅಂಬಾನಿಯವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆ ಎಂದು ಆಪಾದಿಸಿದರು.

ರಕ್ಷಣಾ ಇಲಾಖೆಯ ದಾಖಲೆಗಳ ಪ್ರಕಾರ ಪ್ರಧಾನ ಮಂತ್ರಿ ಕಚೇರಿ ಕೂಡ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಸಮಾನಾಂತರ ಒಪ್ಪಂದ ನಡೆಸಿದ್ದು ಹಾಗಾದರೆ ಪ್ರಧಾನಿಯವರನ್ನು ಈ ಕೇಸಿನಲ್ಲಿ ತನಿಖೆ ನಡೆಸಬಾರದೇಕೆ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.

ಆದರೆ ಸರ್ಕಾರ ಕಾಂಗ್ರೆಸ್ ನ ಆರೋಪವನ್ನು ಆರಂಭದಿಂದಲೇ ನಿರಾಕರಿಸುತ್ತಾ ಬಂದಿದೆ. ರಾಹುಲ್ ಗಾಂಧಿ ಸುಳ್ಳು ಆರೋಪಗಳನ್ನು ಪಟ್ಟಭದ್ರ ಹಿತಾಸಕ್ತಿಯಿಂದ ಹೊರಿಸಿ ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ ಎಂದು ಹೇಳುತ್ತಾ ಬಂದಿದೆ. ಇತ್ತ ಅನಿಲ್ ಅಂಬಾನಿ ಕೂಡ ಭ್ರಷ್ಟಾಚಾರ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

No Comments

Leave A Comment