Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

2ನೇ ಏಕದಿನ ಪಂದ್ಯ: ಭಾರತದ ಟಾಸ್ ಗೆದ್ದ ಆಸ್ಚ್ರೇಲಿಯಾ ಬೌಲಿಂಗ್ ಆಯ್ಕೆ

ನಾಗಪುರ: ಆತಿಥೇಯ ಭಾರತ ತಂಡದ ವಿರುದ್ಧ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿದೆ.

ಮಹಾರಾಷ್ಟ್ರದ ನಾಗಪುರದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳ 2ನೇ ಏಕದಿನ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದ ಆಸಿಸ್ ಪಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಿರುವ ಭಾರತ ತಂಡ ಹೈದರಾಬಾದ್ ನಲ್ಲಿ ಆಡಿದ ತಂಡವನ್ನೇ ನಾಗಪುರದಲ್ಲಿ ನಡೆಯುತ್ತಿರುವ 2ನೇ ಪಂದ್ಯಕ್ಕೂ ಉಳಿಸಿಕೊಂಡಿದೆ.

ಆದರೆ 2ನೇ ಪಂದ್ಯಕ್ಕಾಗಿ ಆಸಿಸ್ ಪಡೆ 2 ಬದಲಾವಣೆ ಮಾಡಿದ್ದು, ನಾಥನ್ ಲಯಾನ್ ಬದಲಿಗೆ ಮಾರ್ಷ್ ಮತ್ತು ಬೆಹೆಂಡ್ರಾಫ್ ಮತ್ತು ಟರ್ನರ್ ರನ್ನು ತಂಡದಿಂದ ಕೈ ಬಿಡಲಾಗಿದೆ.

ತಂಡಗಳು ಇಂತಿವೆ:

ಭಾರತ

ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಅಂಬಟಿ ರಾಯುಡು, ಎಂ ಎಸ್ ಧೋನಿ, ಕೇದರ್ ಜಾಧವ್, ವಿಜಯ್ ಶಂಕರ್, ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್​ಪ್ರೀತ್ ಬುಮ್ರಾ.

ಆಸ್ಟ್ರೇಲಿಯಾ

ಆ್ಯರೋನ್ ಫಿಂಚ್‌ (ನಾಯಕ), ಉಸ್ಮಾನ್ ಖ್ವಾಜಾ, ಶಾನ್ ಮಾರ್ಶ್​​, ಮಾರ್ಕಸ್ ಸ್ಟೊಯಿನಿಸ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಪೀಟರ್ ಹ್ಯಾಂಡ್ಸ್‌ಕಂಬ್, ಅಲೆಕ್ಸ್​ ಕ್ಯಾರಿ, ನೇಥನ್ ಕಾಲ್ಟರ್‌ನೈಲ್, ಪ್ಯಾಟ್ ಕಮಿನ್ಸ್​, ನೇಥನ್​​​ ಲ್ಯಾನ್, ಆ್ಯಡಂ ಜಂಪಾ.

No Comments

Leave A Comment