Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಮಲ್ಪೆ: ಘರ್ಷಣೆಗೆ ತಿರುಗಿದ ಮೀನುಗಾರರ ಪ್ರತಿಭಟನೆ

ಮಲ್ಪೆ; ಲೈಟ್ ಫಿಶಿಂಗ್, ಬುಲ್ ಟ್ರಾಲ್ ಅವೈಜ್ಞಾನಿಕ ಮೀನುಗಾರಿಕೆ ವಿರೋಧಿಸಿ ಮಂಗಳವಾರ ಮಲ್ಪೆ ಆಳ ಸಮುದ್ರ ಮೀನುಗಾರರ ಸಂಘದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಪರ್ಸಿನ್ ಬೋಟ್ ಮೀನುಗಾರರು ಮತ್ತು ಆಳ ಸಮುದ್ರ ಮೀನುಗಾರರು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.

ಪರ್ಸಿನ್ ಬೋಟ್ ಮೀನುಗಾರರು ಅವೈಜ್ಞಾನಿಕ ಮೀನುಗಾರಿಕೆ ನಡೆಸುತ್ತಿದ್ದರೂ ಇದುವರೆಗೆ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಬಂದರು ಗೇಟ್ ಅನ್ನು  ಮುಚ್ಚಿ ಆಳ ಸಮುದ್ರ ಮೀನುಗಾರರು  ಪ್ರತಿಭಟನೆ ನಡೆಸುತಿದ್ದರು. ಈ ನಡುವೆ ಬಂದರು ಗೇಟ್ ಬಂದ್ ಮಾಡಿದಕ್ಕೆ ಪರ್ಸಿನ್ ಮೀನುಗಾರರು ಅಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಇಬ್ಬರು ಮುಖಂಡರ ನಡುವೆ ತೀವ್ರ ಮಾತಿನ ಚಕಮಕಿ ನಡೆದು ಕೈ ಮಿಲಾಯಿಸಿಕೊಂಡರು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಡಿವೈಎಸ್ ಪಿ ಜೈಶಂಕರ್ ಮಾತನಾಡಿ ಮೀನುಗಾರ ಮುಖಂಡರು ತಮ್ಮಲ್ಲೇ ಈ ಸಮಸ್ಯೆ ಬಗೆಹರಿಸಬೇಕೆಂದು ಎಂದು ಸಲಹೆ ನೀಡಿದ್ದಾರೆ.

No Comments

Leave A Comment