Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

“ಮಲ್ಪೆ ಸ್ಫೋಟ’ ವೀಡಿಯೋ: ಕಿಡಿಗೇಡಿ ಬಂಧನ

ಉಡುಪಿ,: ಮುಖಕ್ಕೆ ಬಟ್ಟೆ ಕಟ್ಟಿ”ನಮ್ಮ ಮುಂದಿನ ಗುರಿ ಮಲ್ಪೆ. ಮಲ್ಪೆ ಬೀಚ್‌ನಲ್ಲಿ ಸ್ಫೋಟ  ಮಾಡುತ್ತೇವೆ, ಪಾಕಿಸ್ತಾನ ಜಿಂದಾಬಾದ್’ ಎಂದು ಹೇಳಿ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿಹರಿಯ ಬಿಟ್ಟ ಕಿಡಿಗೇಡಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ

ಬಂಧಿತನನ್ನು ಮಲ್ಪೆ ತೊಟ್ಟಂ ನಿವಾಸಿ ಸೃಜನ್ ಪೂಜಾರಿ(18) ಎಂದು ಗುರುತಿಸಲಾಗಿದೆ. ಈತ ಮುಖಕ್ಕೆ ಬಟ್ಟೆ ಕಟ್ಟಿ ಹಿಂದಿಯಲ್ಲಿ ಮಾತನಾಡುತ್ತ ಮಲ್ಪೆಯಲ್ಲಿ ಸ್ಫೋಟ ನಡೆಸುವ ಬಗ್ಗೆ ಹೇಳಿಕೊಂಡಿದ್ದ. ನಡು ನಡುವೆ ಈತ ನಗಾಡುತ್ತಿದ್ದು ಅಪಹಾಸ್ಯ ಮಾಡುವ ರೀತಿಯಲ್ಲಿ  ವಿಡಿಯೋ ಮಾಡಿದ್ದ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು

ಇದು ಅಪಹಾಸ್ಯದ ರೀತಿಯಲ್ಲಿ ಕಂಡುಬಂದರೂ ಮಾ. 3ರಂದು ಕೇಂದ್ರ ಸಚಿವೆ ಸ್ಮತಿ ಇರಾನಿ ಅವರು ಮಲ್ಪೆ ಕಾರ್ಯಕ್ರಮಕ್ಕೆ ಬರುವ ಕಾರಣ ಈ ವೀಡಿಯೋ ತುಣುಕನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರು.

No Comments

Leave A Comment