Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಬೆಚ್ಚಿ ಬಿದ್ದ ಸಿಲಿಕಾನ್ ಸಿಟಿ! ಕಾರ್ಗತ್ತಲ ರಾತ್ರಿಯಲ್ಲಿ ರೌಡಿ ಶೀಟರ್ ಬರ್ಬರ ಕೊಲೆ, ಮತ್ತೆ ಮೊಳಗಿದ ಪೋಲೀಸರ ಗುಂಡಿನ ಸದ್ದು

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಚ್ಚು ಲಾಂಗುಗಳು ಸದ್ದು ಮಾಡಿದೆ. ಬೆಂಗಲೂರು ಹೊರವಲಯದ ಹೊರಮಾವು ಸಮೀಪ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದೇ ವೇಳೆ ಇನ್ನೊಬ್ಬ ರಔಡಿ ಶೀಟರ್ ಮೇಲೆ ಪೋಲೀಸರು ಫೈರಿಂಗ್ ಸಹ ನಡೆಸಿದ್ದಾರೆ.

ಹೊರಮಾವಿನ ಇಂಡಸ್​ಇಂಡ್​ ಬ್ಯಾಂಕ್ ಎಟಿಎಂ ಸಮೀಪ ರೌಡಿ ಶೀಟರ್ ಪ್ರಶಾಂತ್ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲ್ಲಲಾಗಿದೆ. ಕಾರ್ ನಲ್ಲಿ ಬಂದಿದ್ದ ನಾಲ್ಕಾರು ಮಂದಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

ಹಳೆ ದ್ವೇಷವೇ ಈ ಘಟನೆಗೆ ಕಾರಣ ಎನ್ನಲಾಗಿದ್ದು ಪ್ರಶಾಂತ್ ನನ್ನು ಕೊಚಿ ಕೊಂದದ್ದಲ್ಲದೆ ತಲೆ ಮೇಲೆ ಕಲ್ಲು ಎತ್ತಿ ಹಾಕಿರುವದಾಗಿ ಪೋಲೀಸರು ತಿಳಿಸಿದ್ದಾರೆ.ಹತ್ಯೆ ನಡೆದ ಸ್ಥಳಕ್ಕೆ ತೆರಳಿ ಪೋಲೀಸರು ಪರಿಶೀಲನೆ ನಡೆಸಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.

ಬಾಣಸವಾಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೌಡಿ ಶೀಟರ್ ಮೇಲೆ ಫೈರಿಂಗ್

ಇದೇ ವೇಳೆ ಬೆಂಗಳುರು ಹೆಣ್ಣೂರು ರೈಲ್ವೆ ನಿಲ್ದಾಣ ಸಮೀಪ ಪೋಲೀಸರು ರೌಡಿ ಶೀಟರ್ ದಿನೇಶ್ ಮೇಲೆ ಫೈರಿಂಗ್ ನಡೆಸಿದ್ದಾರೆ.ದಿನೇಶ್ ಬಂಧನಕ್ಕಾಗಿ ತೆರಳಿದ್ದ ವೇಳೆ ಆತ ಪೋಲೀಸರ ಮೇಲೆ ದಾಳಿಗೆ ಮುಂದಾದಾಗ ಫೋಲೀಸರು ಫೈರಿಂಗ್ ನಡೆಸಿ ಆತನನ್ನು ವಶಕ್ಕೆ ಪಡೆಇದ್ದಾರೆ.

ಬಂಧಿತ ದಿನೇಶ್ ದಕ್ಷಿಣ ಭಾರತದ ಕುಖ್ಯಾತ ಸುಪಾರಿ ಕಿಲ್ಲರ್ ಆಗಿದ್ದನೆಂದು ಪೋಲೀಸರು ಮಾಹಿತಿ ನೀಡಿದ್ದಾರೆ.

No Comments

Leave A Comment