Log In
BREAKING NEWS >
ಜುಲಾಯಿ:28ರ೦ದು ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವರಿಗೆ ಜಿ ಎಸ್ ಬಿ ಯುವಕ ಮ೦ಡಳಿಯ ಆಶ್ರಯದಲ್ಲಿ ತುಳಸಿ ಅರ್ಚನೆ ಜರಗಲಿದೆ....ಅಗಸ್ಟ್ 5ರಿ೦ದ 12ರವರೆಗೆ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 119ನೇ ಭಜನಾ ಸಪ್ತಾಹ ಕಾರ್ಯಕ್ರಮ ಜರಗಲಿದೆ.

ಪೈಲಟ್ ಅಭಿನಂದನ್ ಬಿಡುಗಡೆ ಮಾಡಲು ಪಾಕ್ ಗೆ ಫಾತಿಮಾ ಭುಟ್ಟೋ ಆಗ್ರಹ

ವಾಷಿಂಗ್ಟನ್: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳಾದ ಫಾತಿಮಾ ಭುಟ್ಟೋ ಮನವಿ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ನಿರಂತರ ಸರ್ವಾಧಿಕಾರ ಆಡಳಿತ, ಭಯೋತ್ಪಾದನೆ, ಅನಿಶ್ಚಿತತೆಗೆ ದೊಡ್ಡ ಇತಿಹಾಸವೇ ಇದೆ. ನನ್ನ ಕಾಲಘಟ್ಟದ ಪಾಕಿಸ್ತಾನದ ಯುವ ಜನಾಂಗ ಇದನ್ನೆಲ್ಲಾ ಸಹಿಸಿಕೊಳ್ಳೋದು ಕಷ್ಟ ಎಂದು ಮುರ್ತಾಜ್ ಭುಟ್ಟೋ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಭಾರತ ಮತ್ತು ಪಾಕ್ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದ ಸಂದರ್ಭದಲ್ಲಿ ಬುಧವಾರ ಮಿಗ್ 21 ವಿಮಾನವನ್ನು ಗುರಿ ಇಟ್ಟು ಪಾಕ್ ದಾಳಿ ನಡೆಸಲು ಮುಂದಾದ ವೇಳೆ ಪೈಲಟ್ ಅಭಿನಂದನ್ ಸುರಕ್ಷಿತವಾಗಿ ಕೆಳಕ್ಕೆ ಹಾರಿದ್ದರು. ಆದರೆ ಅವರು ಗಡಿ ನಿಯಂತ್ರಣ ರೇಖೆಯೊಳಗೆ ಬಿದ್ದು ಬಿಟ್ಟ ಪರಿಣಾಮ ಪಾಕಿಸ್ತಾನದ ಸೇನೆ ಅಭಿನಂದನ್ ಅವರನ್ನು ಬಂಧಿಸಿತ್ತು.

ಏತನ್ಮಧ್ಯೆ ಪೈಲಟ್ ಅಭಿನಂದನ್ ಅವರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡಬೇಕೆಂದು ಭಾರತ ಒತ್ತಡ ಹೇರಿದೆ. ಅಲ್ಲದೇ ಜಿನಿವಾ ಒಪ್ಪಂದದಂತೆ ಬಂಧಿಸಲ್ಪಟ್ಟ ಅಭಿನಂದನ್ ಅವರಿಗೆ ಕಿರುಕುಳ ನೀಡಬಾರದು ಎಂದು ಪಾಕಿಸ್ತಾನಕ್ಕೆ ತಾಕೀತು ಮಾಡಿದೆ.

No Comments

Leave A Comment