Log In
BREAKING NEWS >
ಅದಮಾರು ಮಠದ ಮು೦ದಿನ ಪರ್ಯಾಯದ ಸ್ವಾಗತ ಕಮಿಟಿಯ ಕಚೇರಿಯನ್ನು ಸೋಮವಾರದ೦ದು ಪರ್ಯಾಯ ಶ್ರೀವಿದ್ಯಾಧೀಶ ತೀರ್ಥಶ್ರೀಪಾದರು ಉದ್ಘಾಟಿಸಿದರು.ಅದಮಾರು ಮಠದ ಕಿರಿಯ ಸ್ವಾಮೀಜಿಗಳಾದ ಶ್ರೀಈಶಪ್ರಿಯ ತೀರ್ಥಶ್ರೀಪಾದರು ಹಾಗೂ ಮಾಜಿ ಸಚಿವರಾದ ಕೆ.ಜಯಪ್ರಕಾಶ್ ಹೆಗ್ಡೆ, ಗೋವಿ೦ದ ರಾಜ್ ಹಾಗೂ ಇತರರು ಹಾಜರಿದ್ದರು. .......ಅಗಸ್ಟ್ 23ಮತ್ತು 24ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿ೦ಡಿ ಕಾರ್ಯಕ್ರಮ ಜರಗಲಿದೆ......

ಕಾಶ್ಮೀರದಲ್ಲಿ ಐಎಎಫ್ ಜೆಟ್‌ ಪತನ; ಇಬ್ಬರ ಸಾವು, ಪೈಲಟ್‌ ನಾಪತ್ತೆ

ಶ್ರೀನಗರ : ಭಾರತೀಯ ವಾಯು ಪಡೆಯ ಜೆಟ್‌ ಇಂದು ಬುಧವಾರ ಬೆಳಗ್ಗೆ 10.05ರ ಸುಮಾರಿಗೆ ಜಮ್ಮು ಕಾಶ್ಮೀರದ ಬಡಗಾಂವ್‌ ಜಿಲ್ಲೆಯಲ್ಲಿ ಪತನಗೊಂಡು ಕನಿಷ್ಠ ಇಬ್ಬರು ವ್ಯಕ್ತಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಜೆಟ್‌ ವಿಮಾನ ಬಡಗಾಂವ್‌ ಜಿಲ್ಲೆಯ ಗರೇಂದ್‌ ಕಲಾನ್‌ ಗ್ರಾಮದಲ್ಲಿ ಹೊಲವೊಂದರಲ್ಲಿ ಪತನಗೊಂಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ತುಂಡಾಗಿ ಪತನಗೊಂಡ ಜೆಟ್‌ ಒಡನೆಯೇ ಬೆಂಕಿ ಹೊತ್ತಿಕೊಂಡು ಉರಿಯತೊಡಗಿತು. ಜೆಟ್‌ ಪತನಗೊಂಡ ತಾಣದಲ್ಲಿ ಓರ್ವನ ಸುಟ್ಟು ಕರಕಲಾದ ಮೃತ ದೇಹ ಕಂಡು ಬಂದಿದೆ.

ಮೃತ ವ್ಯಕ್ತಿಯ ಗುರುತು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ. ಪೈಲಟ್‌ ಗತಿ ಏನಾಯಿತೆಂಬುದು ಕೂಡ ಗೊತ್ತಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೆಟ್‌ ಪತನಗೊಂಡ ತಾಣಕ್ಕೆ ಪೊಲೀಸರು ಧಾವಿಸಿದ್ದಾರೆ. ಭಾರತೀಯ ವಾಯು ಪಡೆಯ ತಂತ್ರಜ್ಞರು ಸ್ಥಳಕ್ಕೆ ತೆರಳಿದ್ದಾರೆ ಎಂದು ಬಡಗಾಂವ್‌ ಎಸ್‌ಎಸ್‌ಪಿ ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

No Comments

Leave A Comment