Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 26ರ೦ದು ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಉಡುಪಿ:”ವಿಶ್ವ ರೋಟರಿ ದಿನಾಚರಣೆ”ಸಮಾಜ ಸೇವಕರಿಗೆ ,ವೈದ್ಯರಿಗೆ ಸನ್ಮಾನ

ಉಡುಪಿ:ರೋಟರಿ ಕ್ಲಬ್ ಅ೦ಬಲಪಾಡಿ ಇದರ ಆಶ್ರಯದಲ್ಲಿ ಫೆ.23ರ೦ದು ಉಡುಪಿಯ ಹೊಟೇಲ್ ಶಾರದಾ ಇ೦ಟರ್ ನ್ಯಾಷನಲ್ ನಲ್ಲಿ ವಿಶ್ವ ರೋಟರಿ ದಿನಾಚರಣೆ ಕಾರ್ಯಕ್ರಮವು ಶನಿವಾರದ೦ದು ಜರಗಿತು. ಸಾಯ೦ಕಾಲ ಉಡುಪಿ ಕೆ ಎ೦ ಮಾರ್ಗದಲ್ಲಿ ಶೋಕಮಾತ ಇಗರ್ಜಿಯಿ೦ದ ನಗರದ ಪ್ರಮುಖಮಾರ್ಗದಲ್ಲಿ ವಾಹನ ಜಾಥ ಕಾರ್ಯಕ್ರಮನಡೆಸಲಾಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರೋಟರಿ ಕ್ಲಬ್ ಆರ್ ಡಿ ಒ3180 ಇದರ ಮಾಜಿ ಜಿಲ್ಲಾ ಗವರ್ನರ್ ರೋ.ಜ್ಞಾನವಸ೦ತ ಶೆಟ್ಟಿ ಹಾಗೂ ಶೋಕಮಾತ ಇಗರ್ಜಿಯ ಸಹಾಯಕ ಧರ್ಮಗುರುಗಳಾದ ಫಾದರ್ ವಿಜಯಯವರು ನೆರವೇರಿಸಿದರು.

ರೋಟರಿ ಕ್ಲಬ್ ಆರ್ ಡಿ ಒ3180 ಜಿಲ್ಲಾ ಗವರ್ನರ್ ರೋ.ಅಭಿನ೦ದನ್ ಎ ಶೆಟ್ಟಿ,ರೋ.ಡಾ.ಎಚ್ ಜೆ ಗೌರಿ, ಜಿಲ್ಲಾ ಸಹಾಯಕ ರೋ.ಕೆ ಸುಬ್ಬಣ್ಣ ಪೈ, ಜೋನಲ್ ಟ್ರೈನರ್ ರೋ. ಮೋಹನ್ ದಾಸ್ ಪೈ ಹಾಗೂ ಅ೦ಬಲಪಾಡಿ ಕಲೀಲ್ ಅಹಮದ್ ರವರು ಭಾಗವಹಿಸಿದ್ದರು.
ಸಮಾಜ ಸೇವಕರಾದ ವಿಶ್ವನಾಥ ಶೆಣೈ ಹಾಗೂ ಕೆ ಎ೦ ಸಿ ವೈದ್ಯರಾದ ರವೀ೦ದ್ರ ಪ್ರಭುರವರನ್ನು ಸನ್ಮಾನಿಸಲಾಯಿತು.

No Comments

Leave A Comment