ಕುಲ್ಗಾಮ್ನಲ್ಲಿ ಗುಂಡಿನ ಕಾಳಗ: ಡಿವೈಎಸ್ಪಿ ಹುತಾತ್ಮ;ಉಗ್ರನ ಹತ್ಯೆ
ಶ್ರೀನಗರ: ಕುಲ್ಗಾಮ್ನಲ್ಲಿ ಭಾನುವಾರ ಸೇನಾ ಪಡೆಗಳು ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಓರ್ವರು ಹುತಾತ್ಮರಾಗಿದ್ದು, ಸೇನಾ ಪಡೆಯ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹತ್ಯೆಗೈಯಲಾಗಿದೆ ಎಂದು ತಿಳಿದು ಬಂದಿದೆ.
ಹುತಾತ್ಮ ಡಿವೈಎಸ್ಪಿ ಅಮಾನ್ ಠಾಕೂರ್ ಎಂದು ತಿಳಿದು ಬಂದಿದೆ.
ತುರಿಗಾಮ್ ಪ್ರದೇಶದಲ್ಲಿ ಉಗ್ರರ ಇರುವಿಕೆಯ ಖಚಿತ ಮಾಹಿತಿಯ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಉಗ್ರರು ಮನೆಯೊಂದರಲ್ಲಿ ಅಡಗಿ ಭದ್ರತಾ ಪಡೆಗಳತ್ತ ಗುಂಡಿನ ಮಳೆ ಗರೆದಿದ್ದಾರೆ.
ಹತ್ಯೆಗೀಡಾದ ಉಗ್ರ ಪುಲ್ವಾಮಾ ದಾಳಿ ನಡೆಸಿದ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವನು ಎನ್ನಲಾಗಿದೆ.