Log In
BREAKING NEWS >
ಸೆ.22ರ೦ದು ಉಡುಪಿಯ ಶ್ರೀಕೃಷ್ಣಮಠದಲ್ಲಿ ಕೋಟಿತುಳಸಿ ಅರ್ಚನೆ ಕಾರ್ಯಕ್ರಮ ಜರಗಲಿದೆ...

ಹುಟ್ಟೂರು ಮಂಗಳೂರಿಗೆ ಆಗಮಿಸಿದ ಐಶ್ವರ್ಯಾ ರೈ ಬಚ್ಚನ್

ಮಂಗಳೂರು: ಮಾಜಿ ವಿಶ್ವ ಸುಂದರಿ, ಬಾಲಿವುಡ್ ಖ್ಯಾತ ನಟಿ ಐಶ್ವರ್ಯಾ ರೈ ಅವರು ಇಂದು ಕದಲತಡಿ ನಗರ ಮಂಗಳೂರಿಗೆ ಆಗಮಿಸಿದ್ದಾರೆ.

ಐಶ್ವರ್ಯಾ ರೈ ಅವರು ತಮ್ಮ ಪತಿ ನಟ ಅಭಿಷೇಕ್ ಬಚ್ಚನ್ ಅವರೊಂದಿಗೆ ಮಂಗಳೂರಿಗೆ ಬಂದಿದ್ದು, ಇತ್ತೀಚಿಗೆ ನಿಧನರಾದ ತಮ್ಮ ಚಿಕ್ಕಪ್ಪ  ದೀನನಾಥ್ ಶೆಟ್ಟಿ ಅವರ ಶ್ರಾದ್ಧ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕದ್ರಿ ದೇವಸ್ಥಾನದಲ್ಲಿ  ಚಿಕ್ಕಪ್ಪ ದೀನನಾಥ್  ಶ್ರಾದ್ಧದಲ್ಲಿ ಪಾಲ್ಗೊಂಡ ಬಳಿಕ ವಾಪಾಸ್  ಮುಂಬೈಗೆ ಐಶ್ವರ್ಯಾ ಹಾಗೂ ಅಭಿಷೇಕ್ ಜೋಡಿ ಪ್ರಯಾಣ ಬೆಳೆಸಲಿದ್ದಾರೆ ಎಂಬುದು ಅವರ ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

ನಟಿ ಐಶ್ವರ್ಯಾ ರೈ  ಅವರು ಮೂಲತ: ಮಂಗಳೂರಿನವರು. ಅವರ ಹತ್ತಿರದ ಕುಟುಂಬಸ್ಥರು ಈಗಲೂ ಮಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಮಗ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ಬಳಿಕ ಐಶ್ವರ್ಯಾ ರೈ ಮುಂಬೈಯಲ್ಲಿಯೇ ವಾಸಿಸುತ್ತಿದ್ದಾರೆ.ಐಶ್ವರ್ಯಾ ರೈ ಹಾಗೂ ಅಭಿಷೇಕ್  ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಆದರೆ, ಮಂಗಳೂರಿಗೆ ಆಕೆ ಬಂದಿರಲಿಲ್ಲ.

No Comments

Leave A Comment