Log In
BREAKING NEWS >
ಜುಲಾಯಿ 4ಕ್ಕೆ ಅದಮಾರು ಮಠದ ಪರ್ಯಾಯಕ್ಕೆ ಕಟ್ಟಿಗೆ ಮುಹೂರ್ತ....

5 ಜನರ ತಲೆ ಕಡಿದರೆ ನಿಧಿ ಸಿಗುತ್ತದೆ: ರಾತ್ರಿ ಕಂಡ ಕನಸು ನಿಜವೆಂದು ಅಜ್ಜಿ ತಲೆ ಕಡಿದ ಮೊಮ್ಮಗ

ಶಿರಸಿ: ಕನಸಿನಲ್ಲಿ ಕಾಣಿಸಿಕೊಂಡ ನಿಧಿಯ ದುರಾಸೆಯಿಂದ ಅಜ್ಜಿಯನ್ನೆ ಮೊಮ್ಮಗ ಅಮಾನುಷವಾಗಿ ಕೊಂದ ಘಟನೆ ತಾಲೂಕಿನ ಬದನಗೋಡಿನಲ್ಲಿ ಗುರುವಾರ ಸಂಭವಿಸಿದೆ.

ಬದನಗೋಡಿನ ಪುಟ್ಟವ್ವ ಗೊಲ್ಲರ್‌ (75) ಮೃತ ದುರ್ದೈವಿ. ಈಕೆಯ ಮೊಮ್ಮಗ, ಆರೋಪಿ ರಮೇಶ ಗೊಲ್ಲರ (32) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ತನಗೆ ಬಿದ್ದಿದ್ದು, ಐದು ಜನರ ತಲೆ ಕಡಿದರೆ ದೊಡ್ಡ ನಿಧಿ ಸಿಗುತ್ತದೆ ಎಂಬ ಕಾರಣಕ್ಕೆ ಅಜ್ಜಿ ತಲೆ ಕಡಿದಿದ್ದಾಗಿ ಆರೋಪಿ ರಮೇಶ ಒಪ್ಪಿಕೊಂಡಿದ್ದಾನೆ. ಈತ ಈ ಮೊದಲು ಮಳಗಿ ಡ್ಯಾಂ ಬಳಿಯಲ್ಲಿ ನಡೆದ ವ್ಯಕ್ತಿಯ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಗುರುವಾರ ಸ್ವತಃ ಗ್ರಾಮಸ್ಥರೇ ನಾಪತ್ತೆಯಾಗಿದ್ದ ಈತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

No Comments

Leave A Comment