Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಪ್ರಧಾನಿ ಮೋದಿಗೆ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ

ದಕ್ಷಿಣ ಕೊರಿಯಾ(ಸಿಯೋಲ್): ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಗೆ ನೀಡಿರುವ ಕೊಡುಗೆ, ಸಹಕಾರವನ್ನು ಪರಿಗಣಿಸಿರುವ ದಕ್ಷಿಣ ಕೊರಿಯಾ ಪ್ರತಿಷ್ಠಿತ ಸಿಯೋಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಪ್ರಶಸ್ತಿ ಕೇವಲ ನನಗೆ ವೈಯಕ್ತಿವಾಗಿ ನೀಡಿಲ್ಲ ಎಂದು ನಂಬುತ್ತೇನೆ. ಯಾಕೆಂದರೆ ಇದು 130 ಕೋಟಿ ಭಾರತೀಯರಿಗೆ ದೊರಕಿದ ಗೌರವವಾಗಿದೆ. ಭಾರತ ದೇಶದ ಜನರ ಶ್ರಮ, ಪ್ರಭಾವ, ನೀಡಿದ ಧೈರ್ಯದಿಂದಾಗಿ ಕಳೆದ 5 ವರ್ಷಗಳಲ್ಲಿ ಭಾರತ ಯಶಸ್ವಿ ಸಾಧಿಸಲು ಸಾಧ್ಯವಾಯಿತು ಎಂದರು.

ದೇಶದ ಜನರ ಭಾಗವಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಿದ್ದೇನೆ. ಅಲ್ಲದೇ ಆ ನಿಟ್ಟಿನಲ್ಲಿ ನಾನು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಮತ್ತು ಸಾಧನೆ ಕುರಿತ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ದೃಢ ನಿರ್ಧಾರಗಳ ಮೂಲಕ ದೇಶಿಯ ಹಾಗೂ ಜಾಗತಿಕವಾಗಿ ಶಾಂತಿಗಾಗಿ ಮೋದಿ ಅವರು ನೀಡಿದ ಕೊಡುಗೆಯನ್ನು ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ ಪರಿಗಣಿಸಿರುವುದಾಗಿ ತಿಳಿಸಿದೆ.

No Comments

Leave A Comment