Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಮಹಾರಾಷ್ಟ್ರದಲ್ಲಿ ಹೈಅಲರ್ಟ್; ಒಂದೆಡೆ IED ಪತ್ತೆ, ಮುಂಬೈನಲ್ಲಿ ಸ್ಫೋಟ

ಮಹಾರಾಷ್ಟ್ರ: ವಾಣಿಜ್ಯ ನಗರಿ ಮುಂಬೈನ ಜನನಿಬಿಢ ಪ್ರದೇಶದಲ್ಲಿ ಶುಕ್ರವಾರ ಸ್ಫೋಟವೊಂದು ಸಂಭವಿಸಿದ್ದರೆ, ಮತ್ತೊಂದೆಡೆ ರಾಯ್ ಗಢ್ ಜಿಲ್ಲೆಯ ಸರ್ಕಾರಿ ಬಸ್ ನಲ್ಲಿ ಐಇಡಿ ಪತ್ತೆಯಾದ ಬಳಿಕ ಮಹಾರಾಷ್ಟ್ರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಬೈನ ಥಾಣೆ ಜಿಲ್ಲೆಯ ಮಿರಾ ರಸ್ತೆ ಸಮೀಪ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ. ಆದರೆ ಇದರಲ್ಲಿ ಕಬ್ಬಿಣದ ಬಾಲ್ಸ್ ಗಳನ್ನು ಬಳಸಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಅಲ್ಲದೇ ರಾಯ್ ಗಢದಲ್ಲಿ ಬಸ್ ನೊಳಗೆ ಐಇಡಿ ಪತ್ತೆಯಾಗಿದ್ದು, ಸ್ಫೋಟ ನಡೆಸಲು ಈ ಸಂಚು ನಡೆಸಲಾಗಿದೆ ಎಂದು ವರದಿ ಹೇಳಿದೆ.

ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ ಎರಡೂ ಘಟನೆಗಳ ಬಗ್ಗೆ ತನಿಖೆ ಆರಂಭಿಸಿದೆ. ಬುಧವಾರ ಮತ್ತು ಗುರುವಾರ ಎರಡೂ ಪ್ರದೇಶಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

No Comments

Leave A Comment