Log In
BREAKING NEWS >
ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದ 91ನೇ ಭಜನಾ ಸಪ್ತಾಹ ಮಹೋತ್ಸವದ ನೇರಪ್ರಸಾರ ಕಾರ್ಯಕ್ರಮಕ್ಕೆ ಸಹಕರಿಸಿದ ದೇವಸ್ಥಾನದ ಆಡಳಿತ ಮ೦ಡಳಿಗೆ ಹಾಗೂ ಭಜನಾ ಸಪ್ತಾಹ ಮಹೋತ್ಸವದ ಸಮಿತಿಯವರಿಗೆ ಮತ್ತು ಜಾಹೀರಾತನ್ನು ನೀಡಿ ಸಹರಿಸಿದ ಎಲ್ಲಾ ಜಾಹೀರಾತುದಾರರಿಗೆ ಕರಾವಳಿ ಕಿರಣ ಡಾಟ್ ಬಳಗದ ವತಿಯಿ೦ದ ಧನ್ಯವಾದಗಳು ಹಾಗೂ ಏಳುದಿನಗಳ ನಮ್ಮ ಅ೦ತರ್ಜಾಲ ಪತ್ರಿಕೆಯನ್ನು ವೀಕ್ಷಿಸಿದ ಎಲ್ಲಾ ಓದುಗರಿಗೆ,ಅಭಿಮಾನಿಗಳಿಗೆ ಅಭಿನ೦ದನೆಗಳನ್ನು ಸಲ್ಲಿಸುತ್ತೇವೆ.

ಕರಾವಳಿ ಕಣ್ಗಾವಲಿಗೆ ಬಿಇಎಲ್‌ನಿಂದ ಕೋಸ್ಟಲ್‌ ಸೆನ್ಸಾರ್‌

ಬೆಂಗಳೂರು: ಕರಾವಳಿಯ ಕಣ್ಗಾವಲಿಗಾಗಿ ಭಾರತ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆ(ಬಿಇಎಲ್‌) ಆಧುನಿಕೃತ ಯಂತ್ರ ತಯಾರಿಸಿ ನೌಕಾಸೇನೆಗೆ ನೀಡಿದ್ದು ಎಲೆಕ್ಟ್ರೋ ಆಪ್ಟಿಕಲ್‌ ಸಿಸ್ಟಮ್‌ನಡಿ ಹೊಸ ತಂತ್ರ ಜ್ಞಾನ ಬಳಸಿ ಸೆನ್ಸಾರ್‌ ಯಂತ್ರ ಸಿದಟಛಿಪಡಿಸಲಾಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಈ ಯಂತ್ರ ಪ್ರದರ್ಶನಕ್ಕೆ ಇಡಲಾಗಿದ್ದು, ಕರಾವಳಿ ಭಾಗದಿಂದ ಭಯೋತ್ಪಾದಕರು ಅಥವಾ ಕಡಲ್ಗಳ್ಳರು ದೇಶದೊಳಗೆ ನುಸುಳುವುದನ್ನು ಈ ಯಂತ್ರದ ಮೂಲಕ ತಪ್ಪಿಸಬಹುದಾಗಿದೆ.

ರಡಾರ್‌ ವ್ಯವಸ್ಥೆಗಿಂತಲೂ ಇದು ಸ್ವಲ್ಪ ಭಿನ್ನವಾಗಿದ್ದು, ಎಲೆಕ್ಟ್ರೋ ಆಪ್ಟಿಕಲ್‌ ಸಿಸ್ಟಮ್‌ ಮೂಲಕ ಈ ಯಂತ್ರ ಕೆಲಸ ಮಾಡುವುದರಿಂದ ದೆಹಲಿ ಮುಖ್ಯ ಕಚೇರಿಯಿಂದಲೇ ಭಾರತದ ಎಲ್ಲ ಗಡಿ ಭಾಗದ ಭದ್ರತೆಯ ನಿಯಂತ್ರಣ ಮಾಡಬಹುದಾಗಿದೆ. 25 ಕಿ.ಮೀ ವ್ಯಾಪ್ತಿಯಲ್ಲಿ ಸಮುದ್ರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆದರೂ ಅದರ ವಿಡಿಯೋ ಮತ್ತು ಛಾಯಾಚಿತ್ರ ತಕ್ಷಣವೇ ಸಿಗಲಿದೆ. 360 ಡಿಗ್ರಿ ವ್ಯಾಪ್ತಿಯನ್ನು ಹೊಂದಿದ ಕ್ಯಾಮರಾ ಇದರಲ್ಲಿದೆ. ಮುಂಬೈನಲ್ಲಿ ನಡೆದ ಭಯೋತ್ಪಾದಕರ ದಾಳಿಯ ನಂತರ ದೇಶದ ಕರಾವಳಿಯ ಸುರಕ್ಷತೆಗಾಗಿ ಅತ್ಯಾಧುನಿಕ ಯಂತ್ರ ತಯಾರಿಸುವ ಕಾರ್ಯಕ್ಕೆ ಬಿಇಎಲ್‌ ಚಾಲನೆ ನೀಡಿತ್ತು. ಇದೀಗ ಯಂತ್ರ ಕಾರ್ಯಾರಂಭಕ್ಕೆ ಸಜ್ಜಾಗಿದ್ದು, ಪ್ರಯೋಗಾರ್ಥ ಪರೀಕ್ಷೆ ಕೇರಳದ ಕರಾವಳಿಯಲ್ಲಿ ಆರಂಭವಾಗಿದೆ. ಬಿಇಎಲ್‌ ಸಿದಟಛಿಪಡಿಸಿರುವ ಎಲೆಕ್ಟ್ರಾನಿಕ್‌ ಆಧಾರಿತ ಕರಾವಳಿ ಕಣ್ಗಾವಲು ವ್ಯವಸ್ಥೆಯ ಮೂಲಕವೇ ಭಾರತೀಯ ನೌಕದಳವು ಕೇರಳದಲ್ಲಿ ಕೆಲವೊಂದು ಮಾಹಿತಿ ಪಡೆಯಲು ಆರಂಭಿಸಿದೆ ಎಂದು ಬಿಇಎಲ್‌ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಯಂತ್ರದ ಕಾರ್ಯತಂತ್ರ?

ಯಂತ್ರ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಮಳೆ,ಚಳಿ, ಗಾಳಿ ಹಾಗೂ ಬಿಸಿಲು ಹೀಗೆ ಎಲ್ಲ ರೀತಿಯ ಹವಾಮಾನಕ್ಕೂ ಒಗ್ಗಿಕೊಂಡು ದಿನದ 24 ಗಂಟೆಯೂ ಈ ಯಂತ್ರ ಕೆಲಸ ಮಾಡಲಿದೆ. ಇದರಲ್ಲಿ ಹಗಲು ಮತ್ತು ರಾತ್ರಿ ಕಾರ್ಯನಿರ್ವ ಹಿಸಬಲ್ಲ ಎರಡು ಕ್ಯಾಮರಾ ಇದೆ. ಅತ್ಯಂತ ಸೂಕ್ಷ್ಮವಾದ ಸೆನ್ಸಾರ್‌ ವ್ಯವಸ್ಥೆ ಅಳವಡಿಸಿರುವು ದರಿಂದ ಅಕ್ರಮವನ್ನು ವೇಗವಾಗಿ ಪತ್ತೆಹಚ್ಚುತ್ತದೆ.

ಸಮುದ್ರದಲ್ಲಿ ಸುಮಾರು 25 ಕಿ.ಮೀ ದೂರದ ವರೆಗಿನ ಚಟುವಟಿಕೆಯನ್ನು ಇದರ ಕಣ್ಗಾವಲಿನ ಮೂಲಕ ನೋಡಬಹುದಾಗಿದೆ. ಅಲ್ಲದೇ, ಹೊರ ರಾಜ್ಯ ಅಥವಾ ಬೇರೆ ದೇಶಗಳಿಂದ ಬೋಟುಗಳು ಭಾರತದ ಗಡಿ ಭಾಗ ಪ್ರವೇಶಿಸಿದರೆ, ತಕ್ಷಣವೇ ಮಾಹಿತಿ ನೀಡಬಲ್ಲ ಸಾಮರ್ಥ್ಯ ಹೊಂದಿದೆ. ನೌಕಪಡೆಯವರು ಇದನ್ನು ಪ್ರಾಯೋಗಿಕವಾಗಿ ಕೇರಳದಲ್ಲಿ ಅನುಷ್ಠಾನಕ್ಕೆ ತಂದಿದ್ದು, ಕರಾವಳಿ ಪ್ರದೇಶಕ್ಕೂ ಇದನ್ನು ಅಳವಡಿಸುವ ಸಾಧ್ಯತೆ ಇದೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಆಗಸದಲ್ಲಿ ಡ್ರೋನ್‌ ಚಿನ್ನಾಟ
ಬೆಂಗಳೂರು: ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಡ್ರೋನ್‌ ಒಲಿಂಪಿಕ್‌ ಪ್ರೇಕ್ಷಕರ ಮನ ಮುದು ಗೊಳಿಸಿತು. ದೇಶದ ವಿವಿಧ ಭಾಗಗಳಿಂದ ಹತ್ತಾರು ನಮೂ ನೆಯ ಡ್ರೋನ್‌ಗಳು ಈ ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಒಂದಕ್ಕಿಂತ ಒಂದು ಪ್ರದರ್ಶನ ನೀಡಿದ ಆ ಡ್ರೋನ್‌ಗಳು ಕೇವಲ ಎರಡು ತಾಸುಗಳಲ್ಲಿ 33.5 ಲಕ್ಷ ರೂ. ಗಳಿಸಿದವು. ದೆಹಲಿಯ ಒಂದೇ ತಂಡ ಅತಿ ಹೆಚ್ಚು ಐದು ಲಕ್ಷ ರೂ. ಬಹುಮಾನ ಬಾಚಿಕೊಂಡಿತು. ಒಟ್ಟಾರೆ 57 ಡ್ರೋನ್‌ ತಂಡಗಳು ಈ ಒಲಿಂಪಿಕ್‌ ಹಾಗೂ ಮಾದರಿ ವಿಮಾನಗಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಈ ಪೈಕಿ 17 ತಂಡಗಳು ಅಂತಿಮ ಸುತ್ತಿಗೆ ಅರ್ಹತೆ ಪಡೆದಿದ್ದವು. ಅಂತಿಮವಾಗಿ 9 ತಂಡಗಳು ವಿವಿಧ ವಿಭಾಗಗಳಲ್ಲಿ ಬಹುಮಾನ ಗಳಿಸಿದವು. ಯುಎಎಸ್‌ -ಡಿಟಿಯು (ಮಾನವರಹಿತ ಏರ್‌ ಸಿಸ್ಟ್‌ಂ-ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ) ವಿದ್ಯಾರ್ಥಿಗಳು ನೀಡಿದ ಫಾರ್ಮೇಷನ್‌ ವಿಭಾಗ (ನಾಲ್ಕೈದು ಡ್ರೋನ್‌ಗಳು ಸೇರಿ ಪರಸ್ಪರ ಸಮನ್ವಯದಿಂದ ಹಾರಾಟ ನಡೆಸುವುದು)ದಲ್ಲಿನ ಪ್ರದರ್ಶನಕ್ಕೆ ಐದು ಲಕ್ಷ ರೂ. ಬಹುಮಾನ ಸಿಕ್ಕಿತು. ಸುಡುವ ಬಿಸಿಲು ಲೆಕ್ಕಿಸದೆ, ಈ ಸ್ಪರ್ಧೆ ನೋಡುವಲ್ಲಿ ಮಕ್ಕಳು ತಲ್ಲೀನರಾಗಿದ್ದರು.

No Comments

Leave A Comment