Log In
BREAKING NEWS >
ಉಡುಪಿ ಶ್ರೀಕೃಷ್ಣನಿಗೆ ಅದ್ದೂರಿ “ಕೋಟಿ ತುಳಸಿ’ ಅರ್ಚನೆ ಕಾರ್ಯಕ್ರಮ...

ಹೆದ್ದಾರಿ ಬದಿ ಕಟ್ಟಡಕ್ಕೆ ಕಾರು ಅಪ್ಪಳಿಸಿ ನಾಲ್ವರು ಸಜೀವ ದಹನ

ಹಾಸನ: ಜಿಲ್ಲೆಯ ಚೆನ್ನರಾಯಪಟ್ಟಣದ ಉದಯಪುರ ಸಮೀಪ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಹಾಸನದ ಕಡೆಗೆ ಬರುತ್ತಿದ್ದ ಕಾರು ಹೆದ್ದಾರಿ ಬದಿಯಲ್ಲಿದ್ದ ಕಟ್ಟಡಕ್ಕೆ ಢಿಕ್ಕಿ ಹೊಡೆಯಿತು. ಢಿಕ್ಕಿ ಹೊಡೆದ ರಭಸಕ್ಕೆ ಕಾರಿನ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ನಾಲ್ವರು ಸಜೀವ ದಹನಗೊಂಡರು ಎಂದು ತಿಳಿದುಬಂದಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ದುರ್ಘಟನೆಯಲ್ಲಿ ಮೃತಪಟ್ಟವರನ್ನು ವಿವೇಕ್ ನಾಯಕ್, ಪತ್ನಿ ರೇಷ್ಮಾ ನಾಯಕ್ ಮತ್ತು ಈ ದಂಪತಿಯ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ವಿವೇಕ್ ನಾಯಕ್ ಅವರು ಮೂಲತಃ ಗುಜ್ಜಾಡಿ ಗ್ರಾಮದ ನಾಯಕವಾಡಿಯವರಾಗಿದ್ದಾರೆ. ಶುಕ್ರವಾರ ತಮ್ಮ ತಂದೆಯವರ ಶ್ರಾದ್ಧ ಕಾರ್ಯ ನಡೆಯಲಿದ್ದು ಇದಕ್ಕಾಗಿ ವಿವೇಕ್ ನಾಯಕ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಿಂದ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ವಿವೇಕ್ ನಾಯಕ್ ಅವರು ಎನ್ ಫೀಲ್ಡ್ ಕಂಪೆನಿಯ ಉದ್ಯೋಗಿಯಾಗಿದ್ದರು.

No Comments

Leave A Comment