Log In
BREAKING NEWS >
ಅಯೋಧ್ಯೆ ಪ್ರಕರಣ: ಸುನ್ನಿ ವಕ್ಫ್ ಬೋರ್ಡ್ ನಿರ್ಧಾರಕ್ಕೆ ಮುಸ್ಲಿಂ ಅರ್ಜಿದಾರರ ವಿರೋಧ!....

ದಾಳಿಗೆ ಪ್ರತೀಕಾರ; ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್

ಜಮ್ಮು-ಕಾಶ್ಮೀರ: ಪುಲ್ವಾಮ ಉಗ್ರರ ದಾಳಿಗೆ ಪ್ರತೀಕಾರ ಎಂಬಂತೆ ಭಾರತೀಯ ಸೇನೆ ಸೋಮವಾರ ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸಿಆರ್ ಪಿಎಫ್ ವಾಹನದ ಮೇಲೆ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಿದ್ದ ಮಾಸ್ಟರ್ ಮೈಂಡ್ ರಶೀದ್ ಘಾಜಿ ಹಾಗೂ ಕಮ್ರಾನ್ ನನ್ನು ಹೊಡೆದುರುಳಿಸಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.

ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ, ಅಫ್ಘಾನ್ ಪ್ರಜೆಯಾಗಿರುವ ರಶೀದ್ ಘಾಜಿ ಅಜರ್ ಮಸೂದ್ ನ ಆಪ್ತನಾಗಿದ್ದ. ಈತ ಅಫ್ಘಾನಿಸ್ತಾನದಲ್ಲಿ ಉಗ್ರ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ, ಅಲ್ಲದೇ ಐಇಡಿ ತಜ್ಞನಾಗಿದ್ದ ಎಂದು ವರದಿ ವಿವರಿಸಿದೆ.

ಡಿಸೆಂಬರ್ 9ರಂದು ಗಡಿಯೊಳಕ್ಕೆ ರಶೀದ್ ನುಸುಳಿದ್ದ. ಅಫ್ಘಾನ್ ನಲ್ಲಿ ಬಾಂಬ್ ತಯಾರಿಕೆಯ ತರಬೇತಿ ಪಡೆದಿದ್ದ. ಉಗ್ರ ಮಸೂದ್ ಅಜರ್ ಜತೆ ನೇರ ಸಂಪರ್ಕದಲ್ಲಿದ್ದ ಘಾಜಿ ಜಮ್ಮು ಕಾಶ್ಮೀರದ ಪುಲ್ವಾಮ ದಾಳಿ ನಡೆಸಲು ಅದಿಲ್ ದಾರ್ ಎಂಬಾತನಿಗೆ ತರಬೇತಿ ನೀಡಿದ್ದ.

ಕಮ್ರಾನ್ ಪಾಕ್ ಭಯೋತ್ಪಾದಕ ಸಂಘಟನೆಯ ಅಜರ್ ನ ನಿಕಟವರ್ತಿಯಾಗಿದ್ದ, ಫೆಬ್ರುವರಿ 14ರಂದು ನಡೆದ ದಾಳಿಯ ಮಾಸ್ಟರ್ ಮೈಂಡ್ ಕಮ್ರಾನ್ ಎಂದು ಶಂಕಿಸಲಾಗಿದ್ದು, ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರೂ ಉಗ್ರರನ್ನು ಹೊಡೆದುರುಳಿಸಿರುವುದಾಗಿ ವರದಿ ವಿವರಿಸಿದೆ.

No Comments

Leave A Comment