Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

BBMP Budget: ಮಹಿಳೆಯರಿಗೆ ಸಂಚಾರಿ ಕ್ಯಾಂಟೀನ್, ಬಂಪರ್ ಘೋಷಣೆ

ಬೆಂಗಳೂರು: ಬಿಬಿಎಂಪಿಯ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಡಳಿತದ ನಾಲ್ಕನೇ ಅವಧಿಯ ಹಾಗೂ 2019-20ನೇ ಸಾಲಿನ ಬಜೆಟ್ ಅನ್ನು ಸೋಮವಾರ ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದರು. ಬಜೆಟ್ ನಲ್ಲಿ ಮಹಿಳೆಯರಿಗೆ ಬರಪೂರ ಘೋಷಣೆ ಮಾಡಲಾಗಿದೆ. ಕೆರೆ, ಬಿಸಿಯೂಟ ಸೇರಿದಂತೆ ಹಲವಾರು ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಮೀಸಲಿಡಲಾಗಿದೆ. ಬಿಬಿಎಂಪಿ ಬಜೆಟ್ ನ ಮುಖ್ಯಾಂಶಗಳು ಇಲ್ಲಿವೆ…

01:32 PM
ಮಾರುಕಟ್ಟೆ ಕಟ್ಟಡಗಳ ನವೀಕರಣಕ್ಕೆ 5 ಕೋಟಿ ರೂಪಾಯಿ, ಬಿಬಿಎಂಪಿ ವ್ಯಾಪ್ತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ 1.50 ಕೋಟಿ ರೂಪಾಯಿ. ಗಿಡ ನೆಡುವ ಕಾರ್ಯಕ್ರಮಕ್ಕೆ 5 ಕೋಟಿ ರೂಪಾಯಿ.
01:25 PM
ಕುಡಿಯುವ ನೀರಿನ ಯೋಜನೆಗೆ 40 ಲಕ್ಷ, ಶಾಲಾ, ಕಾಲೇಜು ನಿರ್ಮಾಣ, ನಿರ್ವಹಣೆಗೆ 25 ಕೋಟಿ, ಡಯಾಲಿಸೀಸ್ ಕೇಂದ್ರ ಸ್ಥಾಪನೆಗೆ 15 ಕೋಟಿ, ಧ್ಯಾನಚಂದ್ ಪುತ್ಥಳಿ ಸ್ಥಾಪನೆಗೆ 1 ಕೋಟಿ ರೂಪಾಯಿ.
01:23 PM
ಸ್ಮಶಾನ ರುದ್ರ ಭೂಮಿಗಳಿಗೆ 12 ಕೋಟಿ, ಬೆಂಗಳೂರಿನಲ್ಲಿ 5 ಲಕ್ಷ ಎಲ್ ಇಡಿ ಬೀದಿದೀಪ ಅಳವಡಿಕೆ, 7 ಕಡೆ ಸ್ಮಾರ್ಟ್ ಪಾರ್ಕಿಂಗ್, ರಾಜಕಾಲುವೆ ನಿರ್ಮಾಣಕ್ಕೆ 25 ಕೋಟಿ,
01:21 PM
ಪ್ರತಿ ವಾರ್ಡ್ ಗೆ 50ರಂತೆ ಹೊಲಿಗೆ ಯಂತ್ರ, ಬಡರೋಗಿಗಳಿಗೆ ಡಯಾಲಿಸೀಸ್ ಕೇಂದ್ರ, ಬೆಂಗಳೂರಿನ 2 ಕಡೆ ಪಶು ಚಿಕಿತ್ಸಾಲಯ, ಮೇಖ್ರಿ ವೃತ್ತದಲ್ಲಿ ಹುತಾತ್ಮ ಯೋಧರ ಪ್ರತಿಮೆ.
01:20 PM
ಮೀಡಿಯಾ ಸೆಂಟರ್ ಸ್ಥಾಪನೆಗೆ 3 ಕೋಟಿ, ಬೈಕ್ ಆ್ಯಂಬುಲೆನ್ಸ್ ಯೋಜನೆಗೆ 5 ಕೋಟಿ, 2 ಆಸ್ಪತ್ರೆಗಳಲ್ಲಿ ಕ್ಯಾನ್ಸರ್ ವಿಭಾಗ ತೆರೆಯಲು 50 ಲಕ್ಷ ರೂಪಾಯಿ.
01:17 PM
ಹಿಂದುಳಿದ ಅಲ್ಪಸಂಖ್ಯಾತರ ಯೋಜನೆ ಕಲ್ಯಾಣಕ್ಕೆ 50 ಕೋಟಿ, ಹಿರಿಯರ ನಾಗರಿಕರಿಗೆ ವಾಕಿಂಗ್ ಸ್ಟಿಕ್, ಪ್ರತಿ ವಾರ್ಡ್ ನ 50 ಹಿರಿಯ ನಾಗರಿಕರಿಗೆ ಉಚಿತ ಊಟ.
01:16 PM
ಗರ್ಣಿಣಿಯರಿಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣ ಅಂಶದ ಮಾತ್ರೆಗೆ 25 ಲಕ್ಷ ರೂಪಾಯಿ. ದಿವ್ಯಾಂಗ ಚೇತನ ಕಲ್ಯಾಣಕ್ಕೆ 75 ಕೋಟಿ.
01:05 PM
ಪಾಲಿಕೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್. ಉಚಿತ ಸ್ಟಂಟ್ ಅಳವಡಿಸಲು 4 ಕೋಟಿ.ಘನತ್ಯಾಜ್ಯ ನಿರ್ವಹಣೆಗೆ 375 ಕೋಟಿ ರೂಪಾಯಿ.
12:54 PM
ರಸ್ತೆ ರಸ್ತೆ ಗುಂಡಿ ಮುಚ್ಚಲು 142 ಕೋಟಿ ರೂಪಾಯಿ ಮೀಸಲು. ಬೆಂಗಳೂರು ರಸ್ತೆಗಳ ವೈಟ್ ಟ್ಯಾಪಿಂಗ್ ಗಾಗಿ 1,172 ಕೋಟಿ, ಪಾದಚಾರಿ ಮಾರ್ಗಗಳ ಅಭಿವೃದ್ಧಿಗಾಗಿ 75 ಕೋಟಿ ರೂಪಾಯಿ.
12:52 PM
ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ 5 ಕೋಟಿ , ಸಂಜಯ್ ಗಾಂಧಿ ಆಸ್ಪತ್ರೆ ಅಭಿವೃದ್ಧಿ 4 ಕೋಟಿ ರೂಪಾಯಿ, ಮೇಲ್ಸೆತುವೆ, ಕೆಳಸೇತುವೆ ನಿರ್ಮಾಣಕ್ಕೆ 50 ಕೋಟಿ ರೂಪಾಯಿ.
12:51 PM
ಅಂಧರ ದತ್ತಿ ಶಿಕ್ಷಣಕ್ಕೆ 10 ಕೋಟಿ ರೂಪಾಯಿ ಮೀಸಲು, ಮಂಗಳಮುಖಿಯರ ವಿಶೇಷ ಅಭಿವೃದ್ಧಿಗಾಗಿ ಒಂದು ಕೋಟಿ ರೂಪಾಯಿ ಮೀಸಲು.
12:50 PM
ಪರಿಶಿಷ್ಟ ಜಾತಿ, ಪಂಗಡಕ್ಕೆ 100 ಕೋಟಿ ಮೀಸಲು, ಪಾಲಿಕೆಯ ಸಾಮಾಜಿಕ ಕಾರ್ಯಕ್ರಮಗಳಿಗೆ 10 ಲಕ್ಷ ರೂಪಾಯಿ ಮೀಸಲು, ನಿರಾಶ್ರಿತರ ತಂಗುದಾಣಕ್ಕೆ 1 ಕೋಟಿ ಮೀಸಲು.
12:49 PM
ಮಂಡೂರು ಕಸ ವಿಲೇವಾರಿ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಗೆ 20 ಕೋಟಿ ರೂಪಾಯಿ. ವಿಪಕ್ಷಗಳ ತೀವ್ರ ಪ್ರತಿಭಟನೆಯ ನಡುವೆಯೇ ಬಜೆಟ್ ಮಂಡನೆ.
12:48 PM
ಅಪಘಾತ ಸಂಭವಿಸಿದಾಗ ತುರ್ತು ಚಿಕಿತ್ಸೆಗಾಗಿ 2 ಕೋಟಿ ರೂಪಾಯಿ, ಬೊಮ್ಮನಹಳ್ಳಿ ಕೆಸಿಡಿಸಿ ಸುತ್ತಮುತ್ತಲ ಹಳ್ಳಿ ಅಭಿವೃದ್ಧಿಗೆ 20 ಕೋಟಿ,ಎಲ್ಲಾ ವಲಯದ ದೋಬಿಘಾಟ್ ಅಭಿವೃದ್ಧಿಗೆ 5 ಕೋಟಿ.
12:43 PM
ಜಯದೇವ ಹೃದ್ರೋಗ ಆಸ್ಪತ್ರೆ ಅಭಿವೃದ್ಧಿಗೆ 5 ಕೋಟಿ ರೂಪಾಯಿ, ಬೆಂಗಳೂರು ಸ್ವಚ್ಛತೆಗೆ 325 ಕೋಟಿ ರೂಪಾಯಿ ಮೀಸಲು, ಶಿವಕುಮಾರ ಶ್ರೀಗಳ ಹೆಸರಿನಲ್ಲಿ 25 ಲಕ್ಷ ರೂ. ಮೀಸಲು.
12:41 PM
ಆರೋಗ್ಯ ಕವಚ ಯೋಜನೆಗೆ 3 ಕೋಟಿ ರೂಪಾಯಿ, ಬುದ್ದಿಮಾಂದ್ಯ ಮತ್ತು ಉಚಿತ ಶಿಕ್ಷಣ ನಿರತ ಸಂಘಗಳಿಗೆ ಅನುದಾನ, ಪ್ರತಿ ವಾರ್ಡ್ ಗೆ ಬೈಸಿಕಲ್ ಖರೀದಿಸಲು 4 ಕೋಟಿ ರೂಪಾಯಿ.
12:40 PM
ವಿದೇಶದಲ್ಲಿ ಕ್ರೀಡಾಪಟುಗಳು ಭಾಗವಹಿಸಲು 1 ಕೋಟಿ ರೂಪಾಯಿ ಧನ ಸಹಾಯ, ಶಿವಕುಮಾರ ಸ್ವಾಮೀಜಿ ಪುತ್ಥಳಿ ನಿರ್ಮಾಣಕ್ಕೆ 5 ಕೋಟಿ ರೂಪಾಯಿ ಮೀಸಲು.
12:39 PM
ಕಡಲೆಕಾಯಿ ಪರಿಷೆ, ದಸರಾ ಸಾಂಸ್ಕೃತಿಕ ಹಬ್ಬಕ್ಕಾಗಿ 2.05 ಕೋಟಿ ರೂಪಾಯಿ. ವಾರ್ಡ್ ಮಟ್ಟದಲ್ಲಿ ಕೆಂಪೇಗೌಡ ದಿನಾಚರಣೆಗೆ 5 ಕೋಟಿ, ಗ್ರಾಮೀಣ ಕ್ರೀಡಾ ಚಟುವಟಿಕೆ, ಅಂಬೇಡ್ಕರ್ ದಿನಾಚರಣೆಗೆ 5.05 ಕೋಟಿ ಮೀಸಲು.
12:29 PM
ಪಿಂಕ್ ಬೇಬಿ ಯೋಜನೆಗೆ 1ಕೋಟಿ ರೂಪಾಯಿ. ಪಿಯೂಸಿ ಬಿಸಿಯೂಟಕ್ಕೆ 1 ಕೋಟಿ ರೂಪಾಯಿ. ಟೈಲರಿಂಗ್ ಯಂತ್ರ ಯೋಜನೆಗೆ 8 ಕೋಟಿ ರೂಪಾಯಿ ಮೀಸಲು.
12:27 PM
ಜಾಹೀರಾತು ಮೂಲಕ 41.09 ಕೋಟಿ ರೂಪಾಯಿ ನಿರೀಕ್ಷೆ. ಶೈಕ್ಷಣಿಕ ಕ್ಷೇತ್ರದ ಸಾಧಕರಿಗೆ 25 ಲಕ್ಷ ರೂಪಾಯಿ ನಗದು. ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ 50 ಲಕ್ಷ ರೂಪಾಯಿ. ಮಂಗಳಮುಖಿಯರ ಅಭಿವೃದ್ಧಿಗೆ 1 ಕೋಟಿ ರೂಪಾಯಿ.
12:25 PM
ತುಮಕೂರು ರಸ್ತೆಯಲ್ಲಿ ಸಿದ್ದಗಂಗಾಶ್ರೀಗಳ ಪುತ್ಥಳಿ. ಮಹಿಳೆಯರ ಆರೋಗ್ಯ ಕವಚ ಯೋಜನೆಗೆ 5 ಕೋಟಿ ರೂಪಾಯಿ. ಕೆರೆಗಳ ನಿರ್ವಹಣೆಗೆ 25 ಕೋಟಿ ರೂಪಾಯಿ.
12:24 PM
ಕಸ ವಿಲೇವಾರಿಗೆ 375 ಕೋಟಿ ರೂಪಾಯಿ ಮೀಸಲು, ಆಸ್ತಿ ತೆರಿಗೆಯಿಂದ 3.5 ಕೋಟಿ ರೂಪಾಯಿ ನಿರೀಕ್ಷೆ. ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮಿ ಯೋಜನೆ.
12:09 PM
ಬಿಬಿಎಂಪಿ ಬಜೆಟ್ ಮಂಡನೆಗೂ ಮುನ್ನ ಸಭೆಯಲ್ಲಿ ಬಿಬಿಎಂಪಿ ಸದಸ್ಯರು ಇತ್ತೀಚೆಗೆ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ದೇಶದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
12:07 PM
ಬಿಬಿಎಂಪಿ 2019-20ನೇ ಸಾಲಿನ ಬಜೆಟ್ ಅನ್ನು ಬಿಬಿಎಂಪಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಮಂಡಿಸಿದರು.
No Comments

Leave A Comment