Log In
BREAKING NEWS >
ಉಡುಪಿಯಲ್ಲಿ ಜೂ. 1ರಿಂದ ಸಿಟಿ ಬಸ್‌ ಸಂಚಾರ....

ಭಾರತಕ್ಕೆ ಸೌದಿ ಪ್ರಿನ್ಸ್‌: ಪಾಕ್‌ ಭಯೋತ್ಪಾದನೆ ಬಗ್ಗೆ ವಿಶೇಷ ಚರ್ಚೆ

ಹೊಸದಿಲ್ಲಿ : ಸೌದಿ ಅರೇಬಿಯದ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಭಾರತಕ್ಕೆ ಫೆ.19-20ರಂದು ಭೇಟಿ ಕೊಡುವ ಸಂದರ್ಭದಲ್ಲಿ ಅವರಿಗೆ ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ಥಾನ, ಭಾರತದ ವಿರುದ್ಧ  ಭಯೋತ್ಪಾದಕರಿಗೆ ಬೆಂಬಲ ಕೊಡುತ್ತಿರುವುದನ್ನು ಮನದಟ್ಟು ಮಾಡಿಕೊಡಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

40 ಸಿಆರ್‌ಪಿಎಫ್ ಯೋಧರ ಹತ್ಯೆ ನಡೆದಿರುವ ಪುಲ್ವಾಮಾ ಉಗ್ರ ದಾಳಿಯಲ್ಲಿ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ  ಸಂಘಟನೆಯ ಕೈವಾಡವಿದ್ದು ಇದಕ್ಕೆ ಪಾಕಿಸ್ಥಾನದ ಪೂರ್ಣ ಬೆಂಬಲವಿದೆ ಎಂಬುದನ್ನು ಅವರಿಗೆ ಭಾರತ ಮನದಟ್ಟು ಮಾಡಿಕೊಡುತ್ತದೆ  ಎನ್ನಲಾಗಿದೆ.

ಸಲ್ಮಾನ್‌ ಅವರೊಂದಿಗೆ ರಾಷ್ಟ್ರಪತಿ ರಾಮ ನಾಥ್‌ ಕೋವಿಂದ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಪ್ರಧಾನಿ ಮೋದಿ ಅವರು ಸೌದಿ ಕ್ರೌನ್‌ ಪ್ರಿನ್ಸ್‌ ಜತೆಗೆ ನಡೆಸುತ್ತಿರುವ ಎರಡನೇ ಭೇಟಿ-ಮಾತುಕತೆ ಇದಾಗಿದೆ.

ಕಳೆದ ವರ್ಷ ನ.29ರಂದು ಆರ್ಜೆಂಟೀನಾದಲ್ಲಿ ನಡೆದಿದ್ದ  ಜಿ-20 ಶೃಂಗದ ಪಾಶ್ವರದಲ್ಲಿ ಮೋದಿ ಅವರು ಸಲ್ಮಾನ್‌ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

No Comments

Leave A Comment