Log In
BREAKING NEWS >
ಉಡುಪಿಯ ಕಲ್ಸoಕದಲ್ಲಿನ ರಾಯಲ್ ಗಾರ್ಡನಲ್ಲಿ ಡಿ 3 ರಿ೦ದ ಉಡುಪಿ ಉತ್ಸವ ಆರ೦ಭಗೊಳ್ಳಲಿದೆ......ನವೆ೦ಬರ್ 22 ರಿ೦ದ ಕರಾವಳಿಯ ಪ್ರಸಿದ್ಧ ದೇವಾಲಯವಾಸ ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಜರಗಲಿದೆ........ಉಡುಪಿಯಲ್ಲಿ ಡಿಸೆ೦ಬರ್ 13ರಿ೦ದ 15 ವರೆಗೆ ಶ್ರೀಕೃಷ್ಣಮಠದ ರಾಜಾ೦ಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವಸಮ್ಮೇಳನ ಜರಗಲಿದೆ....

ಶ್ರೀ ಕೃಷ್ಣ ಮಠಕ್ಕೆ ನಟ ಪುನೀತ್ ರಾಜಕುಮಾರ್ -ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ

ಶ್ರೀ ಕೃಷ್ಣ ಮಠಕ್ಕೆ ಖ್ಯಾತ ಚಲನಚಿತ್ರ ನಟ ಪುನೀತ್ ರಾಜಕುಮಾರ್ ಆಗಮಿಸಿ, ದೇವರ ದರ್ಶನ ಮಾಡಿದರು. ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಸ್ವಾಮೀಜಿಯವರು ಯೋಜಿಸಿರುವ ಸುವರ್ಣ ಗೋಪುರದ ಮಾದರಿಯನ್ನು ದೀಪ ಬೆಳಗಿಸಿ  ಹುಂಡಿಗೆ ಚಿನ್ನದ ಕಾಣಿಕೆಯನ್ನು ಹಾಕುವುದರ ಮೂಲಕ ಉದ್ಘಾಟನೆ ಮಾಡಿದರು.

ಮತ್ತು ಚಿನ್ನದ ತಗಡನ್ನು ಮಾಡಲು ರಾಜಕೋಟ್ ನಿಂದ ತರಿಸಿದ ನೂತನ ರೋಲಿಂಗ್ ಮೆಷೀನನ್ನು ಸ್ವಿಚ್  ಹಾಕುವುದರೊಂದಿಗೆ  ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮುಂಬೈಯ ಉದ್ಯಮಿ ಆದರ್ಶ ಶೆಟ್ಟಿ, ನಟರ ಆಪ್ತ ಕಾರ್ಯದರ್ಶಿ ನೀಲಕಂಠ ವೀರಾಸ್ವಾಮಿ, ಪರ್ಯಾಯ ಮಠದ ಮ್ಯಾನೇಜರ್ ವೆಂಕಟರಮಣ ಆಚಾರ್ಯ, ಪಿ ಆರ್ ಓ ಶ್ರೀಶ ಭಟ್ ಕಡೆಕಾರ್, ಸುರ್ವಣ ಗೋಪುರದ ಕೆಲಸದ ಉಸ್ತುವಾರಿಗಳಾದ ಸಚ್ಚಿದಾನಂದ ರಾವ್, ವೆಂಕಟೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.

No Comments

Leave A Comment