Log In
BREAKING NEWS >
ಜುಲೈ 15 ರಂದು ಸಿ.ಬಿ.ಎಸ್.ಸಿ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟ...

HAL ತಲುಪಿದ ಹುತಾತ್ಮ ಗುರು ಪಾರ್ಥೀವ ಶರೀರ

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರಗಾಮಿಗಳ ದಾಳಿಗೆ ಹುತಾತ್ಮರಾದ ರಾಜ್ಯದ ವೀರ ಯೋಧ ಗುರು ಅವರ ಪಾರ್ಥೀವ ಶರೀರ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ತಲುಪಿದೆ.

ವಾಯುಪಡೆಯ ವಿಶೇಷ ವಿಮಾನದಲ್ಲಿ HAL ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 12.55 ಕ್ಕೆ ಸರಿಯಾಗಿ ಪಾರ್ಥೀವ ಶರೀರವನ್ನು ತರಲಾಯಿತು. ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸಚಿವ ಸದಾನಂದ ಗೌಡ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಮತ್ತಿತರು ವಿಮಾನ ನಿಲ್ದಾಣದಲ್ಲಿ ಗೌರವ ನಮನ ಸಲ್ಲಿಸಿದರು. ವಿಮಾನ ನಿಲ್ದಾಣದಲ್ಲಿ ರಾಜ್ಯ ಗೃಹ ಸಚಿವ ಎಂ.ಬಿ.ಪಾಟೀಲ್ ಹುತಾತ್ಮ ಯೋಧನ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟು ಗೌರವ ಸೂಚಿಸಿದರು.


ತಮಿಳುನಾಡಿನ ಇಬ್ಬರು ಹುತಾತ್ಮ ಯೋಧರು ಮತ್ತು ಕೇರಳದ ಒಬ್ಬ ಯೋಧನ ಪಾರ್ಥೀವ ಶರೀರ ತಲುಪಿಸಿದ ನಂತರ ಕರ್ನಾಟಕದ ಹುತಾತ್ಮ ಯೋಧ ಗುರು ಅವರ ಪಾರ್ಥೀವ ಶರೀರವನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತರಲಾಯಿತು.

ಬೆಂಗಳೂರಿನಿಂದ ಗುರು ಹುಟ್ಟೂರಿಗೆ ವಿಶೇಷ ಸೇನಾ ವಾಹನದಲ್ಲಿ ಪಾರ್ಥೀವ ಶರೀರವನ್ನು ರಸ್ತೆ ಮಾರ್ಗವಾಗಿ ರವಾನಿಸಲಾಗುವುದು. HAL ವಿಮಾನ ನಿಲ್ದಾಣದಿಂದ ದೊಮ್ಮಲೂರು- ಟ್ರಿನಿಟಿ ಜಂಕ್ಷನ್ ಮಾರ್ಗವಾಗಿ ಮಂಡ್ಯ ಜಿಲ್ಲೆಯ ಮದ್ದೂರಿಗೆ ವಿಶೇಷ ವಾಹನ ಸಾಗಲಿದೆ.

No Comments

Leave A Comment