Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌: ಸೆಮಿ ಫೈನಲ್ ತಲುಪಿದ ಸೈನಾ, ಕಶ್ಯಪ್‌, ವರ್ಮಾ

ಗುವಾಹಾಟಿ: ಗುವಾಹಟಿಯಲ್ಲಿ ನಡೆಯುತ್ತಿರುವ 83ನೇ ಹಿರಿಯರ ಬ್ಯಾಡ್ಮಿಂಟನ್‌ ರಾಷ್ಟ್ರೀಯ ಚಾಂಪಿಯನ್‌ಶಿಪ್‌ ನಲ್ಲಿ ಮಾಜಿ ಚಾಂಪಿಯನ್‌ ಗಳಾದ ಸೈನಾ ನೆಹ್ವಾಲ್‌, ಪರುಪಳ್ಳಿ ಕಶ್ಯಪ್‌ ಹಾಗೂ ಸೌರಬ್‌ ವರ್ಮಾ ಅವರು ಶುಕ್ರವಾರ ಸೆಮಿಫೈನಲ್ ತಲುಪಿದ್ದಾರೆ.

ಇಂದು ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಭಾರತದ ಮಾಜಿ ನಂ. 1 ಆಟಗಾರ್ತಿ ಮುಂಬೈನ ನೇಹಾ ಪಂಡಿತ್‌ ಅವರನ್ನು ಸೈನಾ ನೆಹ್ವಾಲ್‌ ಅವರು 21-10, 21-10 ಅಂತರದಿಂದ ಸೋಲಿಸಿದರು.

ಸೈನಾ ನೆಹ್ವಾಲ್ ಅವರು ಸೆಮಿ ಫೈನಲ್ ನಲ್ಲಿ ನಾಗ್ಪುರದ ವೈಷ್ಣವಿ ಭಾಲೆ ಅವರನ್ನು ಎದುರಿಸಲಿದ್ದಾರೆ.

ಪುರುಷರ ಕ್ವಾರ್ಟರ್‌ ಫೈನಲ್‌ನಲ್ಲಿ 2012ರ ಚಾಂಪಿಯನ್‌ ಹಾಗೂ ಸೈನಾ ನೆಹ್ವಾಲ್ ಪತಿ ಪರುಪಳ್ಳಿ ಕಶ್ಯಪ್‌ ಅವರು ಬೋದಿತ್‌ ಜೋಶಿ ಅವರನ್ನು 21-18, 21-16 ಅಂತರದಿಂದ ಮಣಿಸಿ ಸೆಮಿಫೈನಲ್‌ ತಲುಪಿದ್ದಾರೆ.

ಇನ್ನು ಮತ್ತೊಂದು ಪುರುಷರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೌರಭ್‌ ವರ್ಮಾ ಅವರು, ಬಿ. ಸಾಯಿ ಪ್ರಣೀತ್‌ ಅವರನ್ನು 21-11, 21-23, 21-18 ಅಂತರದಲ್ಲಿ ಸೋಲಿಸಿ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಿದರು.

No Comments

Leave A Comment