Log In
BREAKING NEWS >
ಸಮಸ್ತ ಜನತೆಗೆ,ನಮೆಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ``````` ಶ್ರೀಕೃಷ್ಣ ಜನ್ಮಾಷ್ಟಮಿಯ(ಚ೦ದ್ರಾ) ಶುಭಾಶಯಗಳು``````ಮುಂಬಯಿಗೆ ಮತ್ತೆ ಮಳೆ ಭೀತಿ : ಮುಂದಿನ ವಾರ ಧಾರಾಕಾರ ಮಳೆ ಸಾಧ್ಯತೆ......ಭಾರಿ ಮಳೆ-ಪ್ರವಾಹ: ಕರ್ನಾಟಕದ ಕನಿಷ್ಟ 100 ರಸ್ತೆಗಳು, ಸೇತುವೆಗಳಿಗೆ ಹಾನಿ!....

ಪಾಕ್‌ ಕಮಿಷನರ್‌ ಕರೆಸಿಕೊಂಡ ಭಾರತ ಸರಕಾರದಿಂದ ಪ್ರಬಲ ಪ್ರತಿಭಟನೆ

ಹೊಸದಿಲ್ಲಿ : ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರಾದಲ್ಲಿ  40 ಸಿಆರ್‌ಪಿಎಫ್ ಯೋಧರನ್ನು  ಬಲಿ ಪಡೆದಿರುವ ಪಾಕ್‌ ಮೂಲದ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಆತ್ಮಾಹುತಿ ದಾಳಿ ಸಂಬಂಧ ಭಾರತ ಸರಕಾರ ಇಂದು ಶುಕ್ರವಾರ ಪಾಕಿಸ್ಥಾನದ ಹೈಕಮಿಷನರ್‌ ರನ್ನು ಕರೆಸಿಕೊಂಡು ತನ್ನ ಪ್ರಬಲ ಪ್ರತಿಭಟನೆಯನ್ನು ವ್ಯಕ್ತಪಡಿಸಿತು.

ಭಾರತದ ವಿದೇಶ ಕಾರ್ಯದರ್ಶಿ ಪಾಕ್‌ ಹೈಕಮಿಷನರ್‌ ರನ್ನು ವಿದೇಶ ಸಚಿವಾಲಯಕ್ಕೆ ಕರೆಸಿಕೊಂಡು ಪುಲ್ವಾಮಾ ಉಗ್ರ ದಾಳಿಯನ್ನು ಖಂಡಿಸಿ ಪ್ರತಿಭಟಿಸುವ ಅತ್ಯಂತ ಪ್ರಬಲ ‘ಡಿಮಾರ್ಶೆ’ಯನ್ನು ಜಾರಿ ಮಾಡಿತು.

ಪಾಕಿಸ್ಥಾನ ಈ ಕೂಡಲೇ ಜೈಶ್‌ ಎ ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ಕಠಿನ ಕ್ರಮವನ್ನು ಕೈಗೊಳ್ಳಬೇಕು ಮತ್ತು ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಉಗ್ರ ಸಂಘಟನೆಗಳು ಮತ್ತು ಅವುಗಳೊಂದಿಗೆ ನಂಟು ಹೊಂದಿರುವ ವ್ಯಕ್ತಿಗಳನ್ನು ತಡೆಯಬೇಕು ಎಂದು ವಿದೇಶ ಕಾರ್ಯದರ್ಶಿ ಪಾಕಿಸ್ಥಾನಕ್ಕೆ ಸ್ಪಪ್ಟಪಡಿಸಿತು.  ಅಲ್ಲದೆ ಪಾಕ್‌ ವಿದೇಶ ಸಚಿವಾಲಯ ನಿನ್ನೆ ಗುರುವಾರ ಹೊರಡಿಸಿದ್ದ ಹೇಳಿಕೆಯನ್ನು ಭಾರತ ವಿದೇಶ ಕಾರ್ಯದರ್ಶಿ ತಿರಸ್ಕರಿಸಿದರು.

No Comments

Leave A Comment