Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಕಡಬ : ಕಣ್ಣೆದುರೇ ಹೊತ್ತಿ ಉರಿದ ಪ್ರಯಾಣಿಕರ ವಾಹನ

ಕಡಬ: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವೊಂದರಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿರುವ ಘಟನೆ ಕಡಬ ಭಾಗದಿಂದ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಡಬ – ಕಲ್ಲುಗುಡ್ಡೆ ರಸ್ತೆಯ ಮುಳಿಮಜಲು ಎಂಬಲ್ಲಿ ಗುರುವಾರ ಬೆಳಗಿನ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಮತ್ತು ಗಾಯಗೊಂಡಿರುವ ಘಟನೆ ನಡೆದಿಲ್ಲ.


ಗ್ರಾಮಿಣ ಪ್ರದೇಶವಾಗಿರುವ ಕಾರಣದಿಂದ ಈ ಭಾಗದ ಜನರು ಕಡಬ ಪೇಟೆಯ ಕಡೆಗೆ ಬರಲು ಜೀಪು ಮತ್ತು ಮಿನಿ ಪ್ರಯಾಣಿಕ ವಾಹನಗಳನ್ನೇ ಹೆಚ್ಚಾಗಿ ಅವಲಂಬಿಸಿರುತ್ತಾರೆ. ಹಾಗೆಯೇ ಇಂದೂ ಸಹ ಕಲ್ಲುಗುಡ್ಡೆ ಎಂಬ ಪ್ರದೇಶದಿಂದ ಕಡಬ ಕಡೆಗೆ ಪ್ರಯಾಣಿಕರನ್ನು ತುಂಬಿಕೊಂಡು ಬರುತ್ತಿದ್ದ ಟಾಟಾ ಮ್ಯಾಜಿಕ್ ಐರಿಸ್ ವಾಹನವು ಮುಳಿಮಜಲು ಎಂಬ ಪ್ರದೇಶಕ್ಕೆ ತಲುಪಿದಾಗ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಸೂಚನೆ ಸಿಕ್ಕಿದೆ, ತಕ್ಷಣವೇ ಚಾಲಕ ವಾಹನವನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರನ್ನೆಲ್ಲ ಇಳಿಸುತ್ತಿದ್ದಂತೆಯೇ ವಾಹನದಲ್ಲಿ ಕಾಣಿಸಿಕೊಂಡ ಬೆಂಕಿ ದೊಡ್ಡದಾಗುತ್ತಾ ಪೂರ್ತಿ ವಾಹನವನ್ನೇ ಆವರಿಸಿಕೊಂಡಿದೆ. ವಾಹನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದ್ದೇ ಬೆಂಕಿ ಕಾಣಿಸಿಕೊಳ್ಳಲು ಕಾರಣ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವನೀಯ ಅಪಾಯವೊಂದು ತಪ್ಪಿದಂತಾಗಿದೆ.

No Comments

Leave A Comment