Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಮಾಧವ ಕೃಪಾ ಶಾಲೆಯಲ್ಲಿಬೀಳ್ಕೊಡುಗೆ ಸಮಾರಂಭ

????????????????????????????????????

ಮಣಿಪಾಲದ ಮಾಧವ ಕೃಪಾ ಶಾಲೆಯಲ್ಲಿ 4-02-2019 ರಂದುಸಿಬಿಎಸ್‍ಸಿ ಹನ್ನೆರಡನೇತರಗತಿಯವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭವು ಸಂಪನ್ನಗೊಂಡಿತು.

ಸಮಾರಂಭದಅಭ್ಯಾಗತರಾಗಿ ಆಗಮಿಸಿದ ಮಣಿಪಾಲದಟಿ.ಎಂ.ಎ.ಪೈಕಾಲೇಜಿನಡೀನ್ (ಆಡಳಿತ ಮಂಡಳಿ), ಪ್ರಾಧ್ಯಾಪಕರು, ಆಧ್ಯಕ್ಷರು (ಐ.ಟಿ, ಟ್ಯಾಪ್ಮಿ, ಮಣಿಪಾಲ) ಶ್ರೀ ವಿನೋದ್ ಮಾಧವನ್‍ಮಾತನಾಡುತ್ತಾ“ವಿದ್ಯಾರ್ಥಿಗಳ ಶೈಕ್ಷಣಿಕಅಧ್ಯಯನವನ್ನು ಶಿಕ್ಷಣ ಸಂಸ್ಥೆಯು ನೀಡುತ್ತದೆ. ಜೀವನದಅಧ್ಯಯನ ಮುಗಿಯುವುದಿಲ್ಲ. ಶೈಕ್ಷಣಿಕಅರ್ಹತೆಯೊಂದಿಗೆ ಸತತ ಪರಿಶ್ರಮಆತ್ಮಶ್ರದ್ಧೆ, ಕಠಿಣ ಪ್ರಯತ್ನ, ಸಂವಹನ ಕಲೆಯನ್ನು ರೂಢಿಸಿಕೊಂಡರೆ ಮಾತ್ರಜೀವನದಲ್ಲಿ ಯಶಸ್ವಿಯಾಗುತ್ತೀರಿ. ಜೀವನಎಂದೂ ಮುಗಿಯದ ಪಯಣವಾಗಿದ್ದು, ಸದಾಕಲಿಯುವಿಕೆಯಿಂದ ಮಾತ್ರಜೀವನದ ನಿಜವಾದಅರ್ಥಗೊತ್ತಾಗುತ್ತದೆ.ಅನುಭವಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು, ಜೀವನದಕುರಿತಾಗಿ ಆಳವಾಗಿ ಅಧ್ಯಯನಕೈಗೊಂಡು ಸ್ಪಷ್ಟವಾದಜೀವನದ ಸಂದೇಶ ನೀಡಿದ್ದಾರೆ.ಅಂತಹಜೀವನ ಸಂದೇಶ ಪಾಲಿಸಿದರೆ ಭವಿಷ್ಯಉಜ್ವಲವಾಗುತ್ತದೆ”.ಎಂದು ಹೇಳುತ್ತಾ ವಿದ್ಯಾರ್ಥಿಗಳಿಗೆ ಶುಭಕೋರಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿಜ್ಞಾನಜ್ಯೋತಿಯನ್ನುಎಲ್ಲೆಡೆ ಪಸರಿಸಿ ಶಾಲೆಗೆ ಕೀರ್ತಿತರಲಿ ಎಂದು ಹರಸುತ್ತಾ ಶಾಲಾ ಪ್ರಾಂಶುಪಾಲೆ ಶ್ರೀಮತಿ ಜೆಸ್ಸಿ ಆ್ಯಂಡ್ರ್ಯೂಸ್‍ಅವರು ವಿದ್ಯಾರ್ಥಿಗಳಿಗೆ ಬೆಳಗುವ ದೀವಿಗೆ ಹಸ್ತಾಂತರಿಸಿ ಪ್ರತಿಜ್ಞಾವಿಧಿ ಬೋಧಿಸಿದರು.

ಶಾಲಾ ವಿದ್ಯಾರ್ಥಿ ನಾಯಕರಿಷಬ್, ವಿದ್ಯಾರ್ಥಿಜೀವನದ ಪ್ರತಿಕ್ಷಣದಅನುಭವಕ್ಕಾಗಿಧನ್ಯವಾದ ಹೇಳುತ್ತಾ ತಾನು ಶಾಲೆಯಲ್ಲಿಕಲಿತ ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡರು. ಶಾಲಾ ವಿದ್ಯಾರ್ಥಿಗಳಾದ ಆತಿಶ್, ಸಮೃದ್ಧಿ, ಮೈತ್ರಿ ಬಾಯರಿ ಹಾಗೂ ಶಾಲಾ ಶಿಕ್ಷಕಿ ಶ್ರೀಮತಿ ಪಲ್ಲವಿಅವರುತಮ್ಮಅನುಭವವನ್ನು ಹಂಚಿಕೊಂಡರು. ಪೆÇೀಷಕರ ಪರವಾಗಿ ಶ್ರೀಮತಿ ರಾಧಿಕಾಕುಡ್ವರವರು ಮಾತನಾಡಿ“ಭವಿಷ್ಯದ ಮುನ್ನುಡಿ ಬರೆಯಲು ಮುಂದಡಿಯಿಡುವ ವಿದ್ಯಾರ್ಥಿಗಳ ಬಾಳು ನಂದಾದೀಪವಾಗಲಿ” ಎಂದು ಶುಭ ಹಾರೈಸಿದರು. ಶ್ರೀಮತಿ ಸುವರ್ಣ ಹೆಬ್ಬಾರ್‍ಅವರು“ಅರಿವಿನ ಮಹತ್ವ ಹಿರಿದು. ಆದ್ದರಿಂದಜ್ಞಾನ ಸಂಪಾದನೆಗೆ ಶ್ರಮಿಸಿದಷ್ಟೂ ವ್ಯಕ್ತಿತ್ವ ವಿಕಸನವಾಗುತ್ತದೆ. ಇದರಿಂದಇತರರ ಬದುಕು ಬವಣೆಗೆ ಸ್ಪಂದಿಸುವ ಮನೋಭಾವ ನಿಮ್ಮಲ್ಲಿ ಬೆಳೆಯುತ್ತದೆ”ಎಂದು ಸಲಹೆ ನೀಡಿದರು. ಸಮಾರಂಭದಅಧ್ಯಕ್ಷಸ್ಥಾನವನ್ನು ವಹಿಸಿದಶಾಲಾ ಸಂಚಾಲಕರಾದಶ್ರೀ.ಪಿ.ಜಿ.ಪಂಡಿತ್‍ಅವರು “ಶಾಲಾ ಆಡಳಿತ ಮಂಡಳಿಯು ಶಿಕ್ಷಣಕ್ಕೆ ಬೇಕಾಗಿ ಸಕಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶದಕಡೆಗೆಗಮನಹರಿಸಬೇಕು”ಎಂದು ಹಿತವಚನಗೈದರು. ಶಾಲಾ ಸಲಹಾ ಸಮಿತಿಯ ಸದಸ್ಯರಾದಡಾ. ನಾರಾಯಣ್ ಶೆಣೈಅವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಾಲಾ ರಕ್ಷಕ ಶಿಕ್ಷಕ ಸಂಘದಅಧ್ಯಕ್ಷರಾದ ಶ್ರೀ ಹರೀಶ್‍ರಾಜ್ ಹಾಗೂ ಶಾಲಾ ಉಪ ಪ್ರಾಂಶುಪಾಲರಾದ ಶ್ರೀಮತಿ ಶಕಿಲಾಕ್ಷಿ ಕೃಷ್ಣ , ಶ್ರೀಮತಿ ಜ್ಯೋತಿ ಸಂತೋಷ್, ಶಾಲಾ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಶೋಭಾ ಹೆಗ್ಡೆ ಅವರು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿ ದೇವಿಕ ಪದ್ಮಕುಮಾರ್ ಸ್ವಾಗತಿಸಿ, ಶ್ರೀನಿಧಿ ಧನ್ಯವಾದ ಸಮರ್ಪಣೆಗೈದರು.ಫಾತಿಮಾ ತಸ್ಕೀನ್ ನಿರೂಪಿಸಿದರು. ಶಾಲಾ ಶಿಕ್ಷಕಿಯರಾದ ಶುಭಾಕೋಟ್ಯಾನ್ ಹಾಗೂ ಭವಾನಿ ಕಾರ್ಯಕ್ರಮ ಸಂಯೋಜಿಸಿದರು.

No Comments

Leave A Comment