Log In
BREAKING NEWS >
ಉಡುಪಿಯ ಶ್ರೀಕೃಷ್ಣಮಠದಲ್ಲಿ 17-07-2019ರಿ೦ದ 26-09-2019ರವರೆಗೆ ಪ್ರತಿ ನಿತ್ಯ ಸಾಯoಕಾಲ 5ರಿ೦ದ 7ಗoಟೆಯವರೆಗೆ 60ದಿನಗಳ ಕಾಲ ಪರ್ಯoತ ಹರಿಕಥಾ ಜ್ಞಾನ ಯಜ್ಞ ಕಾರ್ಯಕ್ರಮ ನಡೆಯಲಿದೆ.

ಕೋರ್ಟ್‌ ನಿಂದನೆ: ರಾವ್‌, DoPಗೆ ಸುಪ್ರೀಂ ಶಿಕ್ಷೆ, 1 ಲಕ್ಷ ರೂ. ದಂಡ

ಹೊಸದಿಲ್ಲಿ : ಸಿಬಿಐನ ಆಗಿನ ಪ್ರಭಾರ ನಿರ್ದೇಶಕ ಎಂ ನಾಗೇಶ್ವರ ರಾವ್‌ ಮತ್ತು ಸಿಬಿಐ ನ ಪ್ರಾಸಿಕ್ಯೂಶನ್‌ ನಿರ್ದೇಶಕ (DoP) ಎಸ್‌ ಭಾಸು ರಾಮ್‌ ಅವರನ್ನು ಸುಪ್ರೀಂ ಕೋರ್ಟ್‌ ಇಂದು ಮಂಗಳವಾರ ಕೋರ್ಟ್‌ ನಿಂದನೆಯ ಅಪರಾಧಿಗಳೆಂದು ಪರಿಗಣಿಸಿತು.

ಮಾತ್ರವಲ್ಲದೆ ಇಂದು ಕೋರ್ಟ್‌ ಕಲಾಪ ಮುಗಿಯುವ ತನಕ ನ್ಯಾಯಾಲಯದಲ್ಲಿ ಶಿಕ್ಷೆಯ ರೂಪದಲ್ಲಿ ಕುಳಿತಿರಲು ಅವರಿಗೆ ಆದೇಶಿಸಿತು.

ಬಿಹಾರದ ಆಸರೆ ಮನೆ ಲೈಂಗಿಕ ಹಗರಣದ ತನಿಖೆ ನಡಸುತ್ತಿದ್ದ ಸಿಬಿಐ ಜಂಟಿ ನಿರ್ದೇಶಕ ಎ ಕೆ ಶರ್ಮಾ ಅವರನ್ನು ವರ್ಗಾಯಿಸುವ ಮೂಲಕ ಸುಪ್ರೀಂ ಕೋರ್ಟಿನ ಆದೇಶಕ್ಕೆ ಉದ್ದೇಶಪೂರ್ವಕ ಅವಿಧೇಯತೆ ತೋರಿದ ಅಪರಾಧಕ್ಕಾಗಿ ರಾವ್‌ ಮತ್ತು ರಾಮ್‌ ಅವರಿಗೆ ಸರ್ವೋಚ್ಚ ನ್ಯಾಯಾಲಯ  ತಲಾ 1 ಲಕ್ಷ ರೂ. ದಂಡವನ್ನು ವಿಧಿಸಿತು.

ಶರ್ಮಾ ಅವರನ್ನು ವರ್ಗಾಯಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್‌ ಪ್ರಭಾರ ಸಿಬಿಐ ನಿರ್ದೇಶಕ ನಾಗೇಶ್ವರ್‌ ರಾವ್‌ ಮತ್ತು DoP ಭಾಸು ರಾಮ್‌ ಗೆ ಕೋರ್ಟ್‌ ನಿಂದನೆ ನೊಟೀಸ್‌ ಜಾರಿ ಮಾಡಿತ್ತು.

No Comments

Leave A Comment